ಚಂದ್ರಬಾದನಿ ದೇವಸ್ಥಾನ ದೇವಪ್ರಯಾಗದ ಇನ್ನೊಂದು ಪ್ರಸಿದ್ಧ ಶ್ರದ್ಧಾಕೇಂದ್ರ. ಶಕ್ತಿ ದೇವತೆ ಎಂದೇ ಕರೆಸಿಕೊಳ್ಳುವ ಸತಿ ಇಲ್ಲಿನ ಆರಾಧ್ಯ ದೈವ. ಸತಿ ದೇವಿಯ ಸುಂದರ ಪ್ರತಿಮೆಯನ್ನು ಆರಾಧಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಸತಿ ದೇವಿಯ ಮುಂಡ ಹಾಗೂ ಶಸ್ತ್ರಾಸ್ತ್ರಗಳು ಈ ಸ್ಥಳದಲ್ಲಿ ಬಿದ್ದಿತ್ತು. ಹಾಗಾಗಿ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಇಲ್ಲಿಗೆ ಬಂದ ಭಕ್ತರು ಪುರಾತನವಾದ ಹಲವಾರು ವಿಗ್ರಹಗಳು, ಕಬ್ಬಿಣದ ತ್ರಿಶೂಲಗಳನ್ನು ದೇವಸ್ಥಾನದ ಒಳಗೂ ಹೊರಗೂ ಕಣ್ತುಂಬಿಸಿಕೊಳ್ಳಬಹುದು. ಬದರೀನಾಥ, ಕೇದಾರನಾಥ, ಶ್ರೀಖಂಡ ಮುಂತಾದ ಪರ್ವತಗಳನ್ನು ಇಲ್ಲಿಂದಲೇ ವೀಕ್ಷಿಸಿ, ಆನಂದಿಸಬಹುದಾಗಿದೆ.


Click it and Unblock the Notifications