Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಷ್ಟ್ರಪತಿ ಭವನ

ರಾಷ್ಟ್ರಪತಿ ಭವನ, ದೆಹಲಿ

7

ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಕಟ್ಟಡ ಎಂದರೆ ಅದು ರಾಷ್ಟ್ರಪತಿ ಭವನ. ತನ್ನ ಅತ್ಯದ್ಭುತ ವಾಸ್ತುಶಿಲ್ಪದಿಂದ ಮಾತ್ರವಲ್ಲದೆ, ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸ ಇದಾಗಿದೆ ಎಂಬುದು ಮತ್ತೊಂದು ವಿಶೇಷ.

ರಾಷ್ಟ್ರದ ರಾಜಧಾನಿ ಕೊಲ್ಕತ್ತಾ ನಗರದಿಂದ ದೆಹಲಿಗೆ ಬದಲಾವಣೆಗೊಂಡಾಗ ಈ ಕಟ್ಟಡ ನಿರ್ಮಾಣಗೊಂಡಿತು. ಮುಘಲರ ಅದ್ಭುತ ವಾಸ್ತುಶಿಲ್ಪ ಹಾಗೂ ಯೂರೋಪಿನ ವಾಸ್ತುಶಿಲ್ಪಗಳ ಸಮ್ಮಿಲನದ ಫಲವಾಗಿ ಭಾರತದಲ್ಲಿ ವಾಸವಾಗಿದ್ದ ಬ್ರಿಟೀಷ್ ವೈಸ್ ರಾಯ್ ಗೆ ಅನುಕೂಲಕರವಾಗಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಎರಡು ಬಣ್ಣದ ರೀತಿಯಲ್ಲಿ ಕಾಣುವ ಸ್ಯಾಂಡ್ ಸ್ಟೋನ್ ಬಳಸಿದ್ದು, ಸಾಂಚಿಯ ಸ್ಥೂಪಗಳಿಂದ ಸ್ಫೂರ್ತಿ ಹೊಂದಿರುವ ಎತ್ತರದ ಕಂಬಗಳು ಕಟ್ಟಡಕ್ಕೆ ವಿಶೇಷವಾದ ಸೌಂದರ್ಯವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದರ ಮೇಲಿನ ಗೋಪುರವು ಬಹಳ ದೂರದಿಂದಲು ಕಾಣುತ್ತದೆ.

ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಬಣ್ಣ ಬಣ್ಣದ ಮಾರ್ಬಲ್ಲುಗಳಿಂದ ಶೃಂಗರಿಸಲ್ಪಟ್ಟಿದ್ದು ಅತ್ಯಂತ ಐಶಾರಾಮಿ ಕೊಠಡಿಯಾಗಿದೆ. ಮತ್ತೊಂದು ಕಡೆ ಇರುವ ಅಶೋಕನ್ ಹಾಲ್, ಪರ್ಶಿಯನ್ ಮಾದರಿಯಲ್ಲಿ ಶೃಂಗರಿಸಲ್ಪಟ್ಟಿದ್ದು ಮರದ ನೆಲಹಾಸನ್ನು ಹೊಂದಿದೆ. ಅದರ ಮೇಲ್ಭಾಗವು ವಿವಿಧ ಚಿತ್ತಾರಗಳಿಂದ ಅಲಂಕೃತಗೊಂಡಿದ್ದು ನೋಡುಗರ ಮನಸ್ಸನ್ನು ಆಕರ್ಷಿಸುತ್ತವೆ. ಈ ಕಟ್ಟಡವನ್ನು ನೋಡಲು ಬರುವವರಿಗೆ ಇಲ್ಲಿನ ರೂಫ್ ಟಾಪ್, ಕಿಟಕಿಗಳು, ಛತ್ರಿಗಳು ಮುಂತಾದವು ಅತ್ಯಂತ ಆಕರ್ಷಕವಾಗಿದ್ದು ತನ್ನ ಸೌಂದರ್ಯದಿಂದ ಎಂಥವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ.

ಇಲ್ಲಿ ವಾಸವಿರುವ ರಾಷ್ಟ್ರಪತಿಗಳಿಗಾಗಿ ಒಂದು ಡ್ರಾಯಿಂಗ್ ರೂಮ್, ಡೈನಿಂಗ್ ಹಾಲ್, ಬ್ಯಾಂಕ್ವೆಟ್ ಹಾಲ್, ಟೆನ್ನಿಸ್ ಕೋರ್ಟ್, ಕ್ರಿಕೆಟ್ ಫೀಲ್ಡ್ ಹಾಗೂ ಮ್ಯೂಸಿಯಂ ಮುಂತಾದ ಸವಲತ್ತುಗಳನ್ನು ಒದಗಿಸಲಾಗಿದೆ.

ಇಡಿ ಕಟ್ಟಡವು ನಾಲ್ಕು ಅಂತಸ್ತಿನದಾಗಿದ್ದು ಅದರಲ್ಲಿ 340 ಕೊಠಡಿಗಳಿವೆ. ಇಡೀ ಕಟ್ಟಡದ ನಿರ್ಮಾಣದಲ್ಲಿ ಎಲ್ಲೂ ಕಬ್ಬಿಣವನ್ನು ಉಪಯೋಗ ಮಾಡಿಲ್ಲ. ರಾಷ್ಟ್ರಪತಿಗಳ ಈ ಅರಮನೆಗೆ ಭಾರತೀಯ ದೇವಾಲಯಗಳ ಗಂಟೆಗಳನ್ನು ಕಟ್ಟಡದ ಕಂಬಳಲ್ಲಿ ಬಳಸಿರುವುದು ಮತ್ತೊಂದು ವಿಶೇಷವಾಗಿದೆ. ಈ ಗಂಟೆಗಳು ಹಿಂದು, ಬೌಧ ಹಾಗೂ ಜೈನರ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ.

ಇಲ್ಲಿರುವ ಮುಘಲ್ ಉದ್ಯಾನವನವು ಬ್ರಿಟೀಷ್ ಹಾಗೂ ಮುಘಲ್ ಶೈಲಿಯಲ್ಲೇ ನಿರ್ಮಿಸಲಾಗಿದೆ. ಸುಮಾರು 13 ಎಕರೆ ಭೂಮಿಯನ್ನು ಹೊಂದಿರುವ ಈ ಉದ್ಯಾನದಲ್ಲಿ ವಿಶೇಷವಾದ ಹೂಗಿಡಗಳನ್ನು ಬೆಳೆಸಲಾಗಿದೆ.

ವಾಸ್ತುಶಿಲ್ಪದ ಅತ್ಯಂತ ವಿಶೇಷವಾದ ಕಲಾಕೃತಿ ಇದಾಗಿದ್ದು, ಪ್ರವಾಸಿಗರು ರಾಷ್ಟ್ರಪತಿ ಭವನವನ್ನು ನೋಡಲೇ ಬೇಕು ಆಗಲೇ ದೆಹಲಿ ಪ್ರವಾಸ ಪೂರ್ಣವಾಗುವುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat