Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಪ್ರಗತಿ ಮೈದಾನ

ಪ್ರಗತಿ ಮೈದಾನ, ದೆಹಲಿ

4

ಪ್ರಗತಿ ಮೈದಾನವು ದೆಹಲಿಯ ದೊಡ್ಡ ಪ್ರದರ್ಶನ ಕೇಂದ್ರ ಮತ್ತು  ಜನಪ್ರಿಯ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿದೆ. ಇದು 72,000 ಮೀಟರ್ ವ್ಯಾಪಕವಾದ ಪ್ರದರ್ಶನ ಪ್ರದೇಶವಾಗಿದ್ದು ಇಲ್ಲಿ ಹಲವಾರು ಬೇರೆ ಬೇರೆ ಸಭೆ - ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಇದರ ರಕ್ಷಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಾಣಿಜ್ಯ ಪ್ರಚಾರ ಸಂಸ್ಥೆ (ITPO) ಮಾಡುತ್ತಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಪ್ರಚಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಗತಿ ಮೈದಾನವನ್ನು 1982 ರಲ್ಲಿ ಸ್ಥಾಪಿಸಲಾಗಿದ್ದು, ಇದು ಹಳೆಯ ಕೋಟೆ/ಪುರಾನಾ ಕಿಲಾದ ಎದುರಿನಲ್ಲಿದೆ. ಮೈದಾನವು 61,290 ಚದರ ಮೀಟರ್ ಹರಡಿದ್ದು, ಅದರಲ್ಲಿ ಸುಮಾರು 10,000 ಚದರ ಮೀಟರ್ ಗಳಷ್ಟು ಸ್ಥಳವನ್ನು ಮುಕ್ತ ಪ್ರದರ್ಶನಕ್ಕೆಂದು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮೈದಾನದ ಸಂಪೂರ್ಣ ಸಂಕೀರ್ಣವು ಸುಮಾರು 18 ಪ್ರದರ್ಶನ ಕೋಣೆಗಳು, ಹಲವಾರು ಕಟ್ಟಡಗಳು, ತಿನಿಸುಗಳು, ಪ್ರದರ್ಶನ ಪ್ರದೇಶಗಳು ಮತ್ತು ITPO ಕೇಂದ್ರ ಕಾರ್ಯಾಲಯವನ್ನು ಹೊಂದಿದೆ.

ಪ್ರತಿ ವರ್ಷ ಪ್ರಗತಿ ಮೈದಾನದಲ್ಲಿ ಅನೇಕ 70 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ, ಪ್ರಸಿದ್ಧ ವಾರ್ಷಿಕ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳವನ್ನು ನಡೆಸಲಾಗುತ್ತಿದ್ದು, ಇದು 30,000 ವೀಕ್ಷಕರನ್ನು ಮತ್ತು ಸುಮಾರು 10,000 ಪ್ರದರ್ಶಕರನ್ನು ಆಕರ್ಷಿಸುವ ದೊಡ್ಡ ಮೇಳವಾಗಿದೆ.

ಪ್ರಗತಿ ಮೈದಾನದ ಅರ್ಥ ’ಪ್ರಗತಿ ಕ್ಷೇತ್ರ’. ಇದು ರಕ್ಷಣಾ ಕಟ್ಟಡ (ಪೆವಿಲಿಯನ್), ನೆಹರು ಕಟ್ಟಡ, ಸನ್ ಆಫ್ ಇಂಡಿಯಾ ಕಟ್ಟಡ ಮತ್ತು ಇಂದಿರಾ ಕಟ್ಟಡ ಇನ್ನೂ ಹಲವಾರು ಕಟ್ಟಡಗಳನ್ನು ಒಳಗೊಂಡಿದೆ. ಅಲ್ಲದೇ ಮೈದಾನವು ಸಭಾಂಗಣವೊಂದನ್ನು ಒಳಗೊಂಡಿದ್ದು ಇಲ್ಲಿ ಆಗಾಗ್ಗೆ ಪ್ರದರ್ಶನಗಳನ್ನು ನಡೆಸಲಾಗುತ್ತದೆ.

ಪ್ರತಿ ವರ್ಷ ದೆಹಲಿಯ ಈ ಮೈದಾನದಲ್ಲಿ ಆದಾಯ ತೆರಿಗೆ ಇಲಾಖೆಯು ತೆರಿಗೆ ವಸೂಲಾತಿ /ಮರು ಪಾವತಿಗಾಗಿ ಸುಮಾರು 150 ಮಳಿಗೆಗಳನ್ನು ತೆರೆಯುತ್ತದೆ. ಜೊತೆಗೆ ಭಾರತದ ಫ್ಯಾಷನ್ ಡಿಸೈನ್ ಕೌನ್ಸಿಲ್ (FDCI) ಭಾರತದ ಉಡುಪು ವಿನ್ಯಾಸ ಮಂಡಳಿ) ಏರ್ಪಡಿಸಿದ್ದ ಪ್ರಸಿದ್ಧ ವಿಲ್ಸ್ ಲೈಫ್ಸ್ಟೈಲ್ ಇಂಡಿಯನ್ ಫ್ಯಾಷನ್ ವೀಕ್ (WIFW)  2008 ಮತ್ತು 2009 ಗಳನ್ನು ಈ ಮೈದಾನದಲ್ಲಿಯೇ ಹಮ್ಮಿಕೊಳ್ಳಲಾಗಿತ್ತು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu