Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್

ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್, ದೆಹಲಿ

1

ದೆಹಲಿಯ ಹಳೆ ಕೋಟೆ ಸಮೀಪ ಸುಮಾರು 214 ಎಕರೆ ಪ್ರದೇಶದಲ್ಲಿ ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್ ಅಥವಾ ದೆಹಲಿ ಝೂ ಪ್ರಕೃತಿಯಿಂದಲೇ ನಿರ್ಮಿಸಲ್ಪಟ್ಟಿರುವ ಒಂದು ಸುಂದರ ತಾಣವಾಗಿದೆ. ಈ ಮೃಗಾಲಯದಲ್ಲಿ ಸುಮಾರು 1350 ಪ್ರಾಣಿಗಳಿದ್ದು, ಅವುಗಳಲ್ಲಿ ಒಟ್ಟಾರೆ ಪ್ರಪಂಚದಲ್ಲಿರುವ ವಿವಿಧ ಜಾತಿ-ಪ್ರಭೇದದ ಪ್ರಾಣಿ-ಪಕ್ಷಿಗಳ ಪೈಕಿ ಅಂದಾಜು 130 ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಮೃಗಾಲಯವು 1950 ನವೆಂಬರ್ 1ರಂದು ದೆಹಲಿ ಝೂ ಎಂಬ ಹೆಸರಿನಲ್ಲಿ ಆರಂಭವಾಯಿತು. ನಂತರ ಇದನ್ನು ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್ ಎಂದು ಕರೆಯಲಾಗಿದ್ದು, ಇದು ಭಾರತದ ಇತರ ಮೃಗಾಲಯಗಳಿಗೆ ಉತ್ತಮ ಉದಾಹರಣೆಯಾಗಿದೆ. ವನ ಹಾಗೂ ವನಜೀವಿಗಳ ಸಂರಕ್ಷಣೆ ಬಗ್ಗೆ ಇಲ್ಲಿಗೆ ಭೇಟಿ ನೀಡುವವರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ಈ ಮೃಗಾಲಯದ ಮುಖ್ಯ ಗುರಿಯಾಗಿದೆ.

ಇಲ್ಲಿ ಚಿಂಪಾಂಜೀ, ಸ್ಪೈಡರ್ ಮಂಕಿ, ಆಫ್ರಿಕಾ ದೇಶದ ವೈಲ್ಡ್ ಬಫೆಲೋ(ಎಮ್ಮೆ), ಗಿರ್ ಸಿಂಹ, ಮ್ಯಾಕಾಕ್ವೀ, ಬಂಟಿಂಗ್, ವಿವಿಧ ಜಾತಿಯ ಜಿಂಕೆಗಳು ಹಾಗೂ ಇತರೆ ಅನೇಕ ಕಾಡು ಮೃಗಗಳು, ಪಕ್ಷಿಗಳು ಮತ್ತು ಜಲಚರಗಳಿವೆ. ಈ ಮೃಗಾಲಯದಲ್ಲಿ ಸರ್ಪ ಹಾಗೂ ಇತರೆ ಸರೀಸೃಪಗಳಿಗೆ ಸುರಂಗಗಳಲ್ಲಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವಿವಿಧ ಬಗೆ ಬಗೆಯ ಸರ್ಪ ಹಾಗೂ ಸರೀಸೃಪಗಳನ್ನು ಕಾಣಬಹುದು.

ಈ ಝೂ ಕೂಡ ಕೇಂದ್ರೀಯ ಮೃಗಾಲಯದ ಪ್ರಾಧಿಕಾರಕ್ಕೆ ಒಳಪಟ್ಟಿದ್ದು ರಾಯಲ್ ಬೆಂಗಾಲಿ ಟೈಗರ್, ಭಾರತದ ಘೇಂಡಾಮೃಗ, ಸ್ವಾಂಪ್ ಡೀರ್, ಏಶಿಯಾದ ಸಿಂಹ, ಬ್ರೋ ಆಂಟಿಲ್ ರೆಡ್ ಡೀರ್ ಹಾಗೂ ಕಾಡಿನ ಕೆಂಪು ಹುಂಜವನ್ನು ಇಲ್ಲಿ ವಿಶೇಷವಾಗಿ ಸಂರಕ್ಷಿಸಲಾಗಿದೆ.

ಶುಕ್ರವಾರ ಬಿಟ್ಟು ವಾರದ ಎಲ್ಲಾ ದಿನಗಳೂ ಮೃಗಾಲಯ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಬೇಸಿಗೆ ಕಾಲದಲ್ಲಿ ಬೆಳಗ್ಗೆ 8.30 ರಿಂದ ಸಂಜೆ 5:30 ರವರೆಗೆ, ಚಳಿಗಾಲದಲ್ಲಿ ಬೆಳಗ್ಗೆ 9:30 ರಿಂದ ಸಂಜೆ 4:30 ರ ವರೆಗೆ ಮಾತ್ರ ತೆರೆದಿರುತ್ತದೆ, ಇಲ್ಲಿ ಪ್ರವೇಶ ದರ ಭಾರತಿಯರಿಗೆ 5 ರೂ. ಹಾಗೂ ವಿದೇಶಿಯರಿಗೆ 100 ನಿಗದಿ ಪಡಿಸಲಾಗಿದೆ. ಮೃಗಾಲಯದ ಒಳಗೆ ಲಘು ಉಪಹಾರ, ಕಾಫಿ-ಟೀ ಲಭ್ಯವಿರುತ್ತದೆ ಹಾಗೂ ಒಳಗೆ ನಡೆದುಕೊಂಡು ಸುತ್ತಾಡಲು ಸಾಧ್ಯವಾಗದವರಿಗಾಗಿ ಪುಟ್ಟ ವಾಹನದ ವ್ಯವಸ್ಥೆಯು ಕೂಡ ಇಲ್ಲಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu