Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕಶ್ಮೀರಿ ಗೇಟ್‌

ಕಶ್ಮೀರಿ ಗೇಟ್‌, ದೆಹಲಿ

4

ಜನಪ್ರಿಯ ನಗರಿ ದಿಲ್ಲಿಗೆ ಪ್ರವೇಶಿಸುವ ಪ್ರಮುಖ ದ್ವಾರಗಳಲ್ಲಿ ಕಶ್ಮೀರಿ ಗೇಟ್‌ ಒಂದು. ಇದು ದಿಲ್ಲಿಯ ಉತ್ತರ ಭಾಗದಲ್ಲಿರುವ ನಗರವಾದ ಶಹಾಜಿಹಾನಾಬಾದ್‌ (ಇಂದು ಅದನ್ನು ಹಳೆ ದಿಲ್ಲಿ ಎಂದು ಕರೆಯಲಾಗುತ್ತದೆ) ಬಳಿ ಇದೆ. ಈ ಪ್ರವೇಶದ್ವಾರವನ್ನು ಮಿಲಟರಿ ಎಂಜಿನಿಯರ್‌ ರಾಬರ್ಟ್ ಸ್ಮಿತ್‌ 1835 ರಲ್ಲಿ ನಿರ್ಮಿಸಿದ. ಈ ಮಾರ್ಗದಲ್ಲಿ ಮುಂದುವರಿದರೆ ದಿಲ್ಲಿಯಿಂದ ಕಾಶ್ಮೀರ ತಲುಪಬಹುದು. ಆದ್ದರಿಂದ ಈ ಮಾರ್ಗದಲ್ಲಿರುವ ಪ್ರವೇಶದ್ವಾರಕ್ಕೆ ಕಶ್ಮೀರಿ ಗೇಟ್‌ ಎಂದು ಹೆಸರಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗೇಟಿನ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿಯೇ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಬ್ರಿಟಿಷ್‌  ಸೈನ್ಯದ ನಡುವೆ ಕದನ ನಡೆದಿತ್ತು. ಇದರ ಪರಿಣಾಮವೇ 1857ರಲ್ಲಿ ದಿಲ್ಲಿಗೆ ವಿಶೇಷ ಪ್ರಾತಿನಿಧ್ಯ ಹಾಗೂ ಪ್ರಾಧಾನ್ಯ ಸಿಗುವಂತಾಯಿತು.

ಈ ಗೇಟ್‌ ಸುತ್ತಲಿನ ಪ್ರದೇಶ ಕೂಡ ಇದೇ ಹೆಸರಿನಿಂದ ಗುರುತಾಗಿದೆ. ಕಶ್ಮೀರಿ ಗೇಟ್‌ ಇರುವ ವ್ಯಾಪ್ತಿಯಲ್ಲೇ ಹಳೆ ದಿಲ್ಲಿಯ ರೈಲು ನಿಲ್ದಾಣ ಕೂಡ ಇದೆ. ಈ ರೈಲು ನಿಲ್ದಾನ ಎರಡು ಪ್ರವೇಶ ದ್ವಾರ ಹೊಂದಿದೆ. ಒಂದು ಕಶ್ಮೀರಿ ಗೇಟ್‌ ಕಡೆಯಿಂದ ಹಾಗೂ ಇನ್ನೊಂದು ಚಾಂದನಿ ಚೌಕ್‌ ಕಡೆಯಿಂದ ಇದೆ.

ಕಶ್ಮೀರಿ ಗೇಟ್‌ ಸುತ್ತಲಿನ ಇನ್ನಿತರ ಆಕರ್ಷಣೆಗಳೆಂದರೆ ದಿಲ್ಲಿ ಗೇಟ್‌, ಸೇಂಟ್‌ ಜೇಮ್ಸ್‌ ಚರ್ಚ್, ದಿಲ್ಲಿ ಮೆಟ್ರೊ ರೈಲು ನಿಲ್ದಾಣ ಇದೆ. ದಿನದ ಬಹುತೇಕ ಸಮಯ ಇದು ಮಾರುಕಟ್ಟೆ ಪ್ರದೇಶವಾಗಿ ಬಳಕೆಯಾಗುತ್ತದೆ ಹಾಗು ಅತ್ಯಂತ ಜನ ಸಂದಣಿಯಿಂದ ಕೂಡಿರುತ್ತದೆ.

One Way
Return
From (Departure City)
To (Destination City)
Depart On
10 May,Sun
Return On
11 May,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 May,Sun
Check Out
11 May,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 May,Sun
Return On
11 May,Mon