Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕಲ್ಕಾಜಿ ದೇವಾಲಯ

ಕಲ್ಕಾಜಿ ದೇವಾಲಯ, ದೆಹಲಿ

2

ದೇಶದಲ್ಲಿಯೇ ಅತೀಯಾಗಿ ಭೇಟಿ ನೀಡಲ್ಪಡುವ ಹಾಗೂ ಚಿರಪರಿಚಿತ ಮಂದಿರಗಳಲ್ಲಿ ಕಲ್ಕಾಜಿ ದೇವಾಲಯವೂ ಒಂದು. ರಾಷ್ಟ್ರದ ರಾಜಧಾನಿಯ ನೆಹರು ಪ್ಯಾಲೇಸ್‌ ಸಮೀಪದಲ್ಲಿ ಇದು ನೆಲೆಸಿದೆ. ಈ ದೇವಾಲಯ ಹಿಂದು ದೇವತೆ ಕಾಳಿಮಾತೆಗೆ ಮೀಸಲಾಗಿರುವ ದೇವಾಲಯ. ಮಾತೆ ದುರ್ಗೆಯ ಅವತಾರ ಈ ಕಾಳಿ ಮಾತೆ.

ಈ ದೇವಾಲಯವು 'ಮನೋಕಾಮನಾ ಸಿದ್ಧ ಪೀಠ' ಎಂದೂ ಕೂಡ ಹೆಸರಾಗಿದೆ. ಮನಸ್ಸಿನ ಇಷ್ಟವನ್ನು ಹೇಳಿಕೊಳ್ಳುವವರಿಗೆ ಇಲ್ಲಿ ಅದು ಈಡೇರುತ್ತದೆ ಎಂಬ ನಂಬಿಕೆ ಇದೆ. ಜನರ ಬೇಡಿಕೆಯನ್ನು ದೇವಿ ಕಾಳಿ ಪೂರೈಸುತ್ತಾಳೆ. ದೇವಿ ಕಾಳಿಕಾ ಮಾತೆ ಅವತರಿಸಿದ್ದು ಪಾರ್ವತಿ ಮಾತೆಯಿಂದ. ಸುರರನ್ನು ಅಪಾರವಾಗಿ ಕಾಡುತ್ತಿದ್ದ ಅಸುರರನ್ನು ಸಂಹರಿಸಲು ಈಕೆ ಜನ್ಮತಾಳಿದಳು. ಸುರರ ಅಪಾರವಾದ ಬೇಡಿಕೆ ಇದ್ದಿದ್ದದರಿಂದ ಈಕೆಯ ಅವತಾರ ಆಯಿತು. ಆಕೆಯ ನೆನಪಿಗೆ, ಗೌರವಕ್ಕೆ ಈ ಮಂದಿರ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ಇಟ್ಟಿಗೆಗಳಿಂದ ದೇವಾಲಯವನ್ನು ನಿರ್ಮಿಸಲಾಗಿದೆ. ಈಗ ಇದನ್ನು ಮಾರ್ಬಲ್‌ಗಳನ್ನು ಅಳವಡಿಸಿ ಅಲಂಕರಿಸಲಾಗಿದೆ. ಸುತ್ತಲೂ ಸೂಪ್ತಾಕಾರದ ಟವರ್‌ಗಳಿವೆ. ಕೇಂದ್ರದಲ್ಲಿ ಪ್ರತ್ಯೇಕ ಚೇಂಬರ್‌ ನಿರ್ಮಿಸಿದ್ದು ಇದು 12 ದಿಕ್ಕುಗಳನ್ನು ಹೊಂದಿದೆ. ಎಲ್ಲಾ ಕಡೆಗೂ ಪ್ರತ್ಯೇಕ ಪ್ರವೇಶ ದ್ವಾರವಿದೆ. ಇವೆಲ್ಲಕ್ಕೂ ಮಾರ್ಬಲ್‌ ಕೂರಿಸಿ ಅಲಂಕರಿಸಲಾಗಿದೆ. ಇಲ್ಲಿನ ವರಾಂಡವೂ ಚೇಂಬರ್‌ಗೆ ಹೊಂದಿಕೊಂಡಿದೆ. ಚೇಂಬರ್‌ ಸೇರಿದಂತೆ 36 ವಿಶೇಷ ಕಲಾತ್ಮಕ ಪ್ರವೇಶ ಮಾರ್ಗ ಇದಕ್ಕಿದೆ.

ಇಲ್ಲಿ ನಿತ್ಯ ಪೂಜೆ ಇರುತ್ತದೆ. ನವರಾತ್ರಿ ಸಂದರ್ಭದಲ್ಲಿ ಅದ್ದೂರಿ ಉತ್ಸವ ನಡೆಯುತ್ತದೆ. ಹಬ್ಬದ ವಾತಾವರಣ ಇರುತ್ತದೆ. ವರ್ಷದ ಎರಡು ಸಂದರ್ಭದಲ್ಲಿ ಇಲ್ಲಿ ಉತ್ಸವ ನಡೆಯುತ್ತದೆ. ಅಪಾರ ಭಕ್ತರು ಭಾಗಿಯಾಗುತ್ತಾರೆ. ದುರ್ಗಾ ಮಾತೆಯನ್ನು ಆರಾಧಿಸುತ್ತಾರೆ. ಈ ದೇವಾಲಯದ ಸಮೀಪವೇ ಇರುವ ಇತರೆ ಆಕರ್ಷಣೆಗಳೆಂದರೆ ಲೋಟಸ್‌ ಟೆಂಪಲ್‌ ಹಾಗೂ ಇಸ್ಕಾನ್‌ ದೇವಾಲಯ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon