ದೆಹಲಿಯ ಐತಿಹಾಸಿಕ ತಾಣಗಳಲ್ಲೊಂದು ಗುರುದ್ವಾರ ಸೀಸ್ಗಂಜ್. ಇದಕ್ಕೊಂದು ಆಸಕ್ತಿಕರ ಇತಿಹಾಸವಿದೆ. ಗುರುದ್ವಾರವು ಗುರು ತೇಗ್ ಬಹಾದೂರರ ನೆನಪಿಗೆ ಕಟ್ಟಿಸಲಾಗಿದೆ. ಇವರು ಸಿಖ್ಖರ ಒಂಭತ್ತನೇ ಗುರು. ಈ ಭಾಗವನ್ನು ಆಳುತ್ತಿದ್ದ ಔರಂಗಜೇಬನು ಇಸ್ಲಾಂಗೆ ಮತಾಂತರವಾಗಲು ಗುರುವನ್ನು ಒತ್ತಾಯಿಸಿದಾಗ ಬಲವಾಗಿ ನಿರಾಕರಿಸಿದ್ದರು ಎನ್ನಲಾಗಿದೆ.
ಹಲವು ವರ್ಷಗಳ ನಂತರ ಗುರು ಸಿಸ್ಗಂಜ್ರವರ ಭಕ್ತರಾಗಿದ್ದ ಬಾಬಾ ಬಘೇಲ್ ಸಿಂಗ್ ಈ ಪ್ರದೇಶವನ್ನು ಕಂಡುಹಿಡಿದರು. ಇಲ್ಲೇ ಗುರು ಸಿಸ್ಗಂಜ್ ವಾಸಿಸಿದ್ದರು. ನಂತರ ಇಲ್ಲಿ ಅವರ ಗೌರವಕ್ಕೆ ಸ್ಮಾರಕವನ್ನು ನಿರ್ಮಿಸಲಾಯಿತು.
ದೆಹಲಿಯ ಚಾಂದನಿ ಚೌಕ್ನಲ್ಲಿ ಈ ಗುರುದ್ವಾರವಿದೆ. ಗುರುದ್ವಾರವನ್ನು 1930 ರಲ್ಲಿ ನಿರ್ಮಿಸಲಾಯಿತು. ಗುರುದ್ವಾರಕ್ಕೆ ಸಮೀಪವಿರುವ ಇತರೆ ಆಕರ್ಷಣೆಗಳೆಂದರೆ ಕೆಂಪುಕೋಟೆ, ಫಿರೋಜ್ ಶಾ ಕೋಟ್ಲಾ ಮತ್ತು ಜಾಮಾ ಮಸೀದಿ.