Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ದಿಗಂಬರ ಜೈನ್‌ ದೇವಾಲಯ

ದಿಗಂಬರ ಜೈನ್‌ ದೇವಾಲಯ, ದೆಹಲಿ

1

ದಿಲ್ಲಿಯ ಅತ್ಯಂತ ಹಳೆಯ ಜೈನ ಮಂದಿರ ಎಂಬ ಖ್ಯಾತಿಗೆ ಪಾತ್ರವಾಗಿರುವ ದಿಗಂಬರ ಜೈನ ದೇವಾಲಯವು ಕೆಂಪುಕೋಟೆ ಸಮೀಪವೇ ಇದೆ. ಇದು ಈ ಹೆಸರಿನಿಂದ ಮಾತ್ರವಲ್ಲ ಶ್ರೀ ದಿಗಂಬರ ಜೈನ ಲಾಲ್‌ ಮಂದಿರ ಅಂತಲೂ ಪ್ರಸಿದ್ಧವಾಗಿದೆ. ಇದು ದಿಲ್ಲಿಯ ಅತ್ಯಂತ ಜನಪ್ರಿಯ ತಾಣ ಚಾಂದನಿ ಚೌಕ್‌ ಪ್ರದೇಶದಲ್ಲಿದೆ ಅನ್ನುವುದು ಇನ್ನೊಂದು ವಿಶೇಷ.

ಆಕರ್ಷಕ ಕೆಂಪು ಕಲ್ಲಿನಿಂದ ಈ ದೇವಾಲಯ ನಿರ್ಮಾಣಗೊಂಡಿದೆ. ದಿಲ್ಲಿಯ ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ಜೈನ ಮಂದಿರ ಎಂಬ ಖ್ಯಾತಿ ಹೊತ್ತಿರುವ ಈ ತಾಣ ಚಾಂದನಿ ಚೌಕ ಹಾಗೂ ನೇತಾಜಿ ಸುಭಾಷ್‌ಚಂದ್ರ ಮಾರ್ಗದಲ್ಲಿದೆ. ದಿಲ್ಲಿಯ ಅತ್ಯಂತ ಹಳೆಯ ಮಂದಿರ ಎಂದು ಖ್ಯಾತಿ ಹೊತ್ತಿರುವ ದೇವಾಲಯ 1656 ರಲ್ಲಿ ನಿರ್ಮಾಣಗೊಂಡಿದೆ. ಕೆಂಪು ದೇವಾಲಯ, ಲಾಲ್‌ ಮಂದಿರ್‌ ಎಂದೆಲ್ಲಾ ಕರೆಸಿಕೊಂಡಿರುವ ಈ ಮಂದಿರವು ಸಾಕಷ್ಟು ವಿಶೇಷ ಆಕರ್ಷಣೆಯನ್ನು ಅಳವಡಿಸಿಕೊಳ್ಳುತ್ತಲೇ ಇದೆ. ಇಂದಿಗೂ ಇದು ಬೆಳೆಯುತ್ತಲೇ ಇದೆ. ದೇವಾಲಯದ ಮುಖ್ಯ ಆಕರ್ಷಣೆ ಹಾಗೂ ಆರಾಧ್ಯ ದೈವ ದೇವ ಮಹಾವೀರ. ಇವರು ಜೈನರ 24ನೇ ತೀರ್ಥಂಕರರು. ಅಲ್ಲದೇ ದೇವಾಲಯದಲ್ಲಿ ಮೊದಲ ತೀರ್ಥಂಕರರಾರ ದೇವ ಆದಿನಾಥ, ದೇವ ಮಹಾವೀರರಿಗೂ ಆರಾಧ್ಯದೈವವಾಗಿದ್ದ ದೇವ ಪಾರ್ಶ್ವನಾಥ ಕೂಡ ಇದ್ದಾನೆ. ಮಹಾವೀರರಿಗಿಂತ ಇವರು 8 ಶತಮಾನದಷ್ಟು ಹಿಂದಿದ್ದರು. 1931ರಲ್ಲಿ ದಿಗಂಬರ ಜೈನ ಪಂಥದ ಮುಖ್ಯಸ್ಥರು ದಿಲ್ಲಿಗೆ ಭೇಟಿ ನೀಡಿದ್ದರು. ಇವರ ಉನ್ನತ ನೆನಪಿಗಾಗಿ ಈ ಜೈನ ಮಂದಿರವನ್ನು ನಿರ್ಮಿಸಲಾಗಿದೆ.

ಇದೊಂದು ಅತ್ಯದ್ಭುತ ಧಾರ್ಮಿಕ ತಾಣ. ಮೊದಲ ಮಹಡಿಯಲ್ಲಿರುವ ಧಾರ್ಮಿಕ ತಾಣಕ್ಕೆ ಅಪಾರ ಸಂಖ್ಯೆಯ ಭಕ್ತರನ್ನು ಇದು ಸೆಳೆಯುತ್ತದೆ. ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವವರಿಗೆ ಇಲ್ಲೊಂದು ಅವಕಾಶವಿದೆ. ಪುಸ್ತಕ ಮಳಿಗೆ ಒಂದಿದ್ದು, ಜೈನ ಧರ್ಮ ಕುರಿತು ತಿಳಿದುಕೊಳ್ಳಬಯಸುವವರಿಗೆ ಉತ್ತಮ ಮಾಹಿತಿ ಒದಗಿಸುತ್ತದೆ. ಅಲ್ಲದೇ ದೇವಾಲಯದ ಆವರಣದಲ್ಲಿಯೇ ಸಾಕಷ್ಟು ಮಾಹಿತಿ ಯೋಗ್ಯ ಪುಸ್ತಕಗಳು ಸಿಗುತ್ತವೆ.

ಈ ದೇವಾಲಯ ಅತ್ಯಾಕರ್ಷಕವಾಗಿದ್ದು, ಉತ್ತಮ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಸುಂದರವಾದ ಶಿಲ್ಪ ಹಾಗೂ ಗಮನ ಸೆಳೆಯುವ ಚಿತ್ರಕಲೆಯನ್ನು ಒಳಗೊಂಡಿದೆ. ಆರಂಭದಿಂದಲೂ ಸಾಕಷ್ಟು ಹೊಸ ಆಕರ್ಷಣೆಗಳನ್ನು ಅಳವಡಿಸಿಕೊಳ್ಳುತ್ತಲೇ ಬಂದಿರುವ ಮಂದಿರ ಈಗಲೂ ಹೊಸತನವನ್ನು ಮೈಗೂಡಿಸಿಕೊಳ್ಳುತ್ತಿದೆ. 19ನೇ ಶತಮಾನದಲ್ಲಿ ಸಾಕಷ್ಟು ಹೊಸತನವನ್ನು ಇದು ತನ್ನದಾಗಿಸಿಕೊಂಡಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu