Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಚೌಸಟ್ ಖಂಬಾ

ಚೌಸಟ್ ಖಂಬಾ, ದೆಹಲಿ

4

ಸೌಸಟ್ ಖಂಬವು ದಿಲ್ಲಿಯ ಒಂದು ಪ್ರಮುಖ ಗೋರಿ. ಇದನ್ನು ಅಕ್ಬರ್‌ನ ಆಡಳಿತ ಅವಧಿಯಲ್ಲಿ ಪ್ರಧಾನಿ ಆಗಿದ್ದ ಅತಗಾ ಖಾನ್‌ನ ಮಗ ಮಿರ್ಜಾ ಅಜೀಜ್‌ ಕೋಕಾ ನಿರ್ಮಿಸಿದ ಗೋರಿಯಾಗಿದೆ. ಈತ ತನಗಾಗಿ ಇದನ್ನು 1623-24 ರಲ್ಲಿ ನಿರ್ಮಿಸಿಕೊಂಡಿದ್ದ. ಎರಡು ಉರ್ದು ಶಬ್ಧಗಳ ಸೇರ್ಪಡೆಯಿಂದಾಗಿ ಚೌಸಟ್ ಖಂಬಾ ಎಂಬ ಹೆಸರು ಬಂದಿದೆ. ಚೌಸಟ್ ಅಂದರೆ 64 ಹಾಗೂ ಖಂಬಾ ಎಂದರೆ ಖಂಬ ಅಥವಾ ಪಿಲ್ಲರ್‌ ಎಂದಾಗುತ್ತದೆ. ಇದನ್ನು ಜಹಾಂಗೀರ್‌ ಅರಸನ ಆಡಳಿತ ದಿಲ್ಲಿಯಲ್ಲಿದ್ದ ಸಂದರ್ಭದಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಹಜರತ್‌ ನಿಜಾಮುದ್ದೀನ್‌ ಬಸ್ತಿಯಲ್ಲಿರುವ ಈ ಚೌಸಟ್ ಖಂಬಾವು ಚೌಕಾಕಾರದಲ್ಲಿ ನಿರ್ಮಾಣವಾಗಿದೆ. ಬಿಳಿ ಮಾರ್ಬಲ್‌ ಅಳವಡಿಸಿ ಕಟ್ಟಲಾಗಿದೆ. 64 ಕಾಲಂಗಳ ಆಧಾರದ ಮೇಲೆ 25 ಕೊಲ್ಲಿಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಪ್ರತಿ ಕಾಲಂ ಕೂಡ ಸಮಾಧಿಯ ಡೋಮ್‌ನ ಆಧಾರವಾಗಿ ನಿಂತಿವೆ. ಈ ಡೋಮ್‌ ಒಳಗಿಂದ ನೋಡುವವರಿಗೆ ಚೌಕಾಕಾರವಾಗಿ ಕಾಣಿಸುತ್ತದೆ. ಆದರೆ ಹೊರಗಿನಿಂದ ಡೋಮ್‌ ಆಗಿದೆ.

ಇದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಲಾಗಿದೆ. ಈ ಸ್ಮಾರಕವು ನಿಜಾಮುದ್ದೀನ್‌ ಧಾರ್ಮಿಕ ಕಟ್ಟಡದ ಒಂದು ಭಾಗವಾಗಿದೆ. ಅಲ್ಲದೇ ಇದು ಅತಗಾ ಖಾನ್‌ ಗೆ ಸಂಬಂಧಿಸಿದ ಸ್ಮಾರಕ ಕೂಡ ಆಗಿದೆ. ಪಾರಂಪರಿಕ ಕಟ್ಟಡವಾಗಿ ಇದು ಜನಪ್ರಿಯವಾಗಿದೆ. ಯುಆರ್‌ಎಸ್‌ ಮಹಲ್‌ ಎಂಬ ಸಮ್ಮೇಳನ ಸಭಾಂಗಣ ಇಲ್ಲಿದೆ. ಇದಲ್ಲದೇ ಮಿರ್ಜಾ ಘಾಲಿಬ್‌ ಟೊಂಬ್‌ ಕೂಡ ಇಲ್ಲಿದ್ದು, ಇದರ ನಿರ್ಮಾಣವನ್ನು ಜನಪ್ರಿಯ ಉರ್ದು ಘಜಲ್‌ ಗಾಯಕ ಮಿರ್ಜಾ ಘಾಲಿಬ್‌ಗಾಗಿ ನಿರ್ಮಿಸಲಾಗಿದೆ. ಇದರಲ್ಲಿಯೇ ಘಾಲಿಬ್‌ರನ್ನು ಸಮಾಧಿ ಮಾಡಲಾಗಿದೆ. ಇಲ್ಲಿರುವ ಘಾಲಿಬ್‌ ಅಕಾಡೆಮಿಯಲ್ಲಿ ಉರ್ದು ಸಾಹಿತ್ಯದ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯವಿದೆ. ಅಲ್ಲದೇ ಇಲ್ಲಿ ಮಿರ್ಜಾ ಘಾಲಿಬ್‌ರ ಸಂಗ್ರಹ, ಚಿತ್ರಕಲೆ, ಕಲೆ ಪ್ರಕಾರಗಳ ಸಂಗ್ರಹ ಇರಿಸಲಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun