ದಿಗ್ಗಿ ನದಿಯಿಂದ ಹುಟ್ಟುವ ಕಾಳಿ ನದಿಯು ಸುಮಾರು 4 ಲಕ್ಷ ಜನರ ಜೀವನಾಡಿಯಾಗಿದೆ. ಹಲವಾರು ಅಣೆಕಟ್ಟುಗಳನ್ನು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಗಣೇಶಗುಡಿ ಬಳಿ ಇರುವ ಸುಪಾ ಅಣೆಕಟ್ಟು ಕಾಳಿ ನದಿಗೆ ಕಟ್ಟಲಾಗಿರುವ ದೊಡ್ಡ ಅಣೆಕಟ್ಟು ಎನ್ನಲಾಗಿದೆ. ಸುಪಾ ಅಣೆಕಟ್ಟಿನಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ.ಪ್ರವಾಸಿಗರು ಕಾಳಿ ನದಿಯಲ್ಲಿ ಬೋಟಿಂಗ್ ಮಾಡಬಹುದು. ಅಲ್ಲದೇ ತೆಪ್ಪದಲ್ಲಿ ಕುಳಿತುಕೊಂಡು ನದಿಯಲ್ಲಿ ಪ್ರಯಾಣಿಸಬಹುದು. ಈ ರೀತಿ ಪ್ರವಾಸಿಗರು ಜಲಕ್ರೀಡೆಯೊಂದಿಗೆ ಪ್ರಕೃತಿ ಸೌಂದರ್ಯ ಸವಿಯುತ್ತ, ಪಕ್ಷಿಗಳ ಕಲರವ ಕೇಳುತ್ತ ಮತ್ತು ವಿವಿಧ ಜಾತಿಯ ಪಕ್ಷಿಗಳನ್ನು ನೋಡಬಹುದಾಗಿದೆ. ಇಲ್ಲಿ ಪ್ರವಾಸಿಗರು ಕಿಂಗಫಿಷರ್, ವೀವ್ ಬರ್ಡ್ ಮತ್ತಿತರ ಅಪರೂಪದ ಪಕ್ಷಿಗಳ ಸಂಕುಲವನ್ನು ನೋಡಬಹುದು.184 ಕಿ.ಮೀ. ಉದ್ದ ಹೊಂದಿರುವ ಕಾಳಿ ನದಿಯು ಸದಾಶಿವಗಡ ಕೋಟೆ ಬಳಿ ಸಮುದ್ರ ಸೇರುತ್ತದೆ. ಅಲ್ಲಿ ವಿಶಾಲವಾದ ಸೇತುವೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಗೋವಾ ಮತ್ತು ಕರ್ನಾಟಕ ರಾಜ್ಯದ ಸಂಪರ್ಕ ರಸ್ತೆಯೂ ಆಗಿದೆ. ಪ್ರವಾಸಿಗರು ಕಾಳಿ ನದಿಗೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳಲ್ಲಿ ಭೇಟಿ ನೀಡಬಹುದಾಗಿದೆ.


Click it and Unblock the Notifications