ದೇವ್ಕಾ ಬೀಚ್ ದಮನ್ ನ ಅದ್ಬುತ ಬೀಚ್ ಆಗಿದೆ. ಸಣ್ಣ ದಮನ್ ನಿಂದ ಸುಮಾರು 3 ಮೈಲಿ ದೂರದಲ್ಲಿದೆ. ಈ ಶಾಂತ ಮತ್ತು ಸುಂದರ ಬೀಚ್ ನ ಅಲೆಗಳನ್ನು ಕಾಲಿಗೆ ತಾಗಿಸಿಕೊಳ್ಳುತ್ತ ನಡೆದುಕೊಂಡು ಹೋಗುವುದು ಒಂದು ಸುಂದರ ಮತ್ತು ಮರೆಯಲಾರದ ಅನುಭವವಾಗುತ್ತದೆ.
ಬೀಚ್ ನಲ್ಲಿ ಅಲೆಗಳು ಕಡಿಮೆ ಇರುವಾಗ ಪ್ರವಾಸಿಗರು ಇಲ್ಲಿ ಅಲೆದಾಡುತ್ತ ಕಪ್ಪೆಚಿಪ್ಪು ಇನ್ನಿತರ ಸಮುದ್ರ ವಸ್ತುಗಳನ್ನು ಸಂಗ್ರಹಿಸಬಹುದು. ಬೇಸಿಗೆಯ ಧಗೆಯನ್ನು ಸಹಿಸಲು ಇಲ್ಲಿ ಈಜಲೂಬಹುದು. ಆದಾಗ್ಯೂ ಇಲ್ಲಿ ಕೊರೆತ ,ಚೂಪು ಮತ್ತು ಒರಟಾದ ರಚನೆಗಳು ಇರಬಹುದಾದ್ದರಿಂದ ಈಜುಗಾರರು ಮೊದಲೇ ಜಾಗ್ರತೆ ವಹಿಸುವುದು ಉತ್ತಮ.
ಬೀಚ್ ನಲ್ಲಿ ಈಜುವುದು ನಿಮಗೆ ಬೋರ್ ಎನಿಸಿದರೆ ಅಲ್ಲೇ ಹತ್ತಿರದಲ್ಲಿರುವ ಅಮ್ಯುಸ್ಮೆಂಟ್ ಪಾರ್ಕ್ ಗೆ ಹೋಗಿ ಆನಂದಿಸಬಹುದು. ಕಲಾತ್ಮಕವಾದ ಈ ಉದ್ಯಾನವನದಲ್ಲಿ ಸಂಗೀತ ಕಾರಂಜಿ ಮತ್ತು ನಡಿಗೆಗಳು, ಮಕ್ಕಳು ಮತ್ತು ವಯಸ್ಕರು ಆಡಬಹುದಾದ ಕುದುರೆ ಸವಾರಿ, ಆಟದ ಸಾಧನಗಳು, ಆಹಾರ ಕೀಲುಗಳು ಮತ್ತು ಆಟಿಕೆಗಳು, ಬಟ್ಟೆ ಮತ್ತು ಇಲೆಕ್ಟ್ರಾನಿಕ್ ಮಾರಾಟ ಅಂಗಡಿಗಳು ಇವುಗಳನ್ನು ಆನಂದಿಸಬಹುದು.
ಈ ಪಾರ್ಕ್ ನಾರಿಯಲ್ ಪೂರ್ಣಿಮ ಮತ್ತು ಜನಪದ ನೃತ್ಯ ಮತ್ತಿತರ ಹಬ್ಬ ಮತ್ತು ವಾರಾಂತ್ಯಗಳ ಸಂದರ್ಭದಲ್ಲಿ ಉಜ್ವಲ ಬೆಳಕಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.


Click it and Unblock the Notifications