ಖಜ್ಜೀಯಾರ್ ಟ್ರೆಕ್ಕಿಂಗ್ ಹಳ್ಳಿ ಎಂದೇ ಇದು ಜನಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದಾಗ ಟ್ರೆಕ್ಕಿಂಗ್ ಇಲ್ಲಿನ ಪ್ರಮುಖ ಆಕರ್ಷಣೆ ಆಗಿರುತ್ತದೆ. ಈ ಹಳ್ಳಿಯ ಸುತ್ತಲೂ ಇರುವ ಹಸಿರು ದಟ್ಟ ಕಾಡು, ಬೆಟ್ಟಗುಡ್ಡಗಳ ರಮಣೀಯ ನೋಟ ಕಣ್ಮನ ಸೆಳೆಯುತ್ತದೆ. ಇದೇ ಇಲ್ಲಿನ ವಿಶೇಷವಾಗಿದೆ. ಟ್ರೆಕ್ಕಿಂಗ್ ಮೂಲಕ ಇಲ್ಲಿನ ಗುಡ್ಡ, ಬೆಟ್ಟದ ತಪ್ಪಲು ತಲುಪಿ ಸುಂದರ ಪ್ರಕೃತಿ ವೀಕ್ಷಿಸುವುದು ಸಾಹಸಿಗಳಿಗೆ ಅತಿಯಾದ ಸಂತಸ ತಂದುಕೊಡುತ್ತದೆ.
ಖಜ್ಜೀಯಾರ್ ವು ಚಂಬಾ ಹಾಗೂಕಾಲಾತೋಪ್ ವನ್ಯಜೀವಿ ಧಾಮ ಪ್ರದೇಶದ ಜನಪ್ರಿಯ ಟ್ರೆಕ್ಕಿಂಗ್ ತಾಣ ಎಂಬ ಹೆಗ್ಗಳಿಕೆ ಹೊಂದಿದೆ. ಎಲ್ಲಾ ವಯೋಮಾನದವರೂ ಇಲ್ಲಿ ಟ್ರೆಕ್ಕಿಂಗ್ ತೆರಳಬಹುದು. ಇದಕ್ಕೆ ಯಾವುದೇ ಸಾಹಸ ಪಡುವ ಅಗತ್ಯ ಇಲ್ಲ. ಅನುಭವವೂ ಬೇಕಿಲ್ಲ.


Click it and Unblock the Notifications