ಡಾಲ್‌ಹೌಸಿಯ ಗಾಂಧಿ ಚೌಕದಿಂದ 330 ಮೀಟರ್ ಎತ್ತರದಲ್ಲಿದೆ ಮೋತಿ ಟಿಬ್ಬಾ. ನಿಸರ್ಗ ಪ್ರೇಮಿಗಳು, ವಿಹಾರಿಗಳಿಗೆ ಇದೊಂದು ಖಾಯಂ ಪ್ರವಾಸಿ ತಾಣ. ಅರಣ್ಯ ಪ್ರದೇಶದ ಭಾಗವನ್ನು ಮೋತಿ ಟಿಬ್ಬಾ ಎನ್ನಲಾಗುತ್ತಿದ್ದು, ಪೈನ್, ಪೀರ್, ಓಕ್ ಮರದಿಂದ ಇದು ಸಮೃದ್ಧವಾಗಿದೆ. ಹೊಸ ನವೋಲ್ಲಾಸವನ್ನು ವೀಕ್ಷಕರಿಗೆ ತಂದು ಕೊಡುತ್ತದೆ. ಇಲ್ಲಿ ಲಂಗೂರ್‌ಗಳು ಅಪಾರ ಸಂಖ್ಯೆಯಲ್ಲಿದ್ದು, ಮರದಿಂದ ಮರಕ್ಕೆ ಹಾರುವುದನ್ನು ನೋಡುವುದೇ ವೀಕ್ಷಕರಿಗೆ ಮಜಾ ಕೊಡುತ್ತದೆ.


Click it and Unblock the Notifications