ಸಮುದ್ರ ಮಟ್ಟದಿಂದ 2036 ಅಡಿ ಎತ್ತರದಲ್ಲಿದೆ ಝಂಡ್ರಿ ಘಾಟ್. ಪ್ರಮುಖ ಪ್ರವಾಸಿ ತಾಣವಾಗಿರುವ ಈ ಘಾಟ್, ಡಾಲ್‌ಹೌಸಿಯಿಂದ 2 ಹಾಗೂ ಸುಭಾಷ್ ಬಾವೋಲಿಯಿಂದ 1.5 ಕಿ.ಮೀ. ದೂರದಲ್ಲಿದೆ. ಝಂಡ್ರಿ ಘಾಟ್‌ನ ಪ್ರಮುಖ ಆಕರ್ಷಣೆ ಚಂಬಾ ಅರಸರ ಕಾಲದ ರಾಯಲ್ ಪ್ಯಾಲೇಸ್. ಬ್ರಿಟಿಷರು ಈ ಭಾಗವನ್ನು ಆವರಿಸಿಕೊಳ್ಳುವ ಮುನ್ನ ಈ ಪ್ರದೇಶವನ್ನು ಚಂಬಾ ಅರಸರು ಆಳುತ್ತಿದ್ದರು. ಅವರು ಈ ತಾಣವನ್ನು ಅಭಿವೃದ್ಧಿ ಪಡಿಸಿಕೊಂಡಿದ್ದರು. ಇಂದಿಗೂ ಇದೊಂದು ವೀಕ್ಷಣಾ ತಾಣವಾಗಿ ಪ್ರಸಿದ್ಧವಾಗಿದೆ. ಪೈನ್ ಮರಗಳಿಂದ ಆವೃತ್ತವಾಗಿದ್ದು, ಆಕರ್ಷಕ ನೋಟದಿಂದ ಗಮನ ಸೆಳೆಯುತ್ತದೆ.


Click it and Unblock the Notifications