ಅಖಂಡ ಚಂಡಿ ಪ್ಯಾಲೇಸ್‌ನ್ನು 1747-1765 ರ ನಡುವಿನ ಅವಧಿಯಲ್ಲಿ ರಾಜಾ ಉಮೇದ್ ಸಿಂಗ್ ನಿರ್ಮಿಸಿದ. ಇದನ್ನು ಚಂಬಾ ರಾಜ ವಂಶಸ್ಥರ ವಾಸಕ್ಕೆ ನಿರ್ಮಿಸಲಾಯಿತು. ಮುಂದಿನ ವರ್ಷಗಳಲ್ಲಿ ಇದು ದೇವಾಲಯವಾಗಿ ಪರಿವರ್ತನೆಗೊಂಡು ರಾಜಾ ಶ್ಯಾಮ ಸಿಂಗ್ ಇದನ್ನು ಬ್ರಿಟಿಷ್ ಎಂಜಿನಿಯರ್‌ಗಳ ಸಹಾಯದೊಂದಿಗೆ ನವೀಕರಿಸಿದ್ದರು. ಇದನ್ನು ಇವರ ಕುಟುಂಬ, ನಂತರದ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿತು.
ಗಾಜಿನ ಅಲಂಕಾರ ಹಾಗೂ ಪೇಂಟಿಂಗ್ ಮಾಡಿದ ಗೋಡೆ ಈ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿದೆ. ಇಂದು ಇಲ್ಲಿರುವ ಆಕರ್ಷಕ ವಸ್ತುಗಳು, ಕೆತ್ತನೆ ಹಾಗೂ ಕಲಾತ್ಮಕ ವಸ್ತುಗಳು ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿವೆ. ಆ ಕಾಲದ ಆಕರ್ಷಕ ವಸ್ತುಗಳನ್ನು ಒಳಗೊಂಡ ಈ ಸೌಧ ಎಲ್ಲಕ್ಕಿಂತ ಪ್ರಮುಖ ನಿರ್ಮಾಣವಾಗಿ ಗೋಚರಿಸುತ್ತದೆ. ಈ ಪ್ಯಾಲೇಸ್ ಆವರಣದಲ್ಲಿಯೇ ದೇವಾಲಯವಿದ್ದು, ಅತ್ಯಂತ ಪುರಾತನ ನಿರ್ಮಾಣ ಎಂಬ ಕೀರ್ತಿ ಹೊಂದಿದೆ.


Click it and Unblock the Notifications