ಹಾರಂಗಿ ಜಲಾಶಯವು ಹಾರಂಗಿ ನದಿಗೆ ಕಟ್ಟಿದ ಆಣೆಕಟ್ಟಾಗಿದೆ. ಇದು ಕಾವೇರಿ ನದಿಗೆ ಒಂದು ಉಪನದಿಯಾಗೊದೆ. ಕುಶಾಲನಗರದಿಂದ 9 ಕಿ.ಮೀ ದೂರದಲ್ಲಿರುವ ಹುದ್ಲೂರು ಗ್ರಾಮದಲ್ಲಿದೆ. ಇದು ಕೊಡಗಿನಲ್ಲಿನ ಒಂದು ಅತ್ಯುತ್ತಮ ಪಿಕ್‌ನಿಕ್ ತಾಣವಾಗಿದೆ. ಸಾರ್ವಜನಿಕ ಇಲಾಖೆಯ ಅಡಿಯಲ್ಲಿ ಇಲ್ಲಿ ಪ್ರವಾಸಿ ಮಂದಿರವಿದೆ. ಮೊದಲೇ ರಿಸರ್ವೇಶನ್ ಮಾಡಿದರೆ ಪ್ರವಾಸಿಗರು ಇಲ್ಲಿ ಒಂದು ರಾತ್ರಿಯನ್ನು ಕಳೆಯಬಹುದು. ನೈರುತ್ಯ ಮಾನ್ಸೂನ್‌ನಿಂದಾಗಿ ಬೀಳುವ ಅತಿಯಾದ ಮಳೆಯಿಂದಾಗಿ, ಮಳೆಗಾಲದಲ್ಲಿ ನದಿಯು ಸಂಪೂರ್ಣ ತುಂಬಿರುತ್ತದೆ. ಈ ಪ್ರದೇಶವು ಪ್ರಶಾಂತವಾಗಿದ್ದು, ಇಡೀ ಜಗತ್ತಿನೊಂದಿಗೆ ಸಂಬಂಧವನ್ನೇ ಕಡಿದುಕೊಂಡಂತಿದೆ.


Click it and Unblock the Notifications