ಲ್ಯಾಂಬ್ಸ್ ರಾಕ್ ಕುಣ್ಣೂರಿನ ಮತ್ತೊಂದು ಆಕರ್ಷಣೀಯ ತಾಣ. ನೀವು ಯಾವತ್ತಾದರೂ ಬೆಟ್ಟದ ತುದಿ ಹತ್ತಿ ಕೆಳಗಿನ ದೃಶ್ಯವನ್ನು ಕಂಡಿದ್ದೀರಾ? ಒಂದು ಕ್ಷಣ ದೇವರೇ ಪ್ರತ್ಯಕ್ಷವಾದಂತೆ, ಕಣ್ಣು ಹಾಯಿಸಿದಷ್ಟೂ ಕಾಣುವ ಹಚ್ಚ ಹಸಿರು ಮತ್ತು ಕಂದು ಬಣ್ಣದ ಭೂಮಿಯ ನೋಟವನ್ನು ಆನಂದಿಸಿದ್ದೀರಾ? ಇಲ್ಲವಾದರೆ ಅಂಥದೊಂದು ಅನುಭವ ಪಡೆಯಲು ಲ್ಯಾಂಬ್ಸ್ ರಾಕ್ ನಲ್ಲಿ ಮಾತ್ರ ಸಾಧ್ಯ. ಕುಣ್ಣೂರಿನಿಂದ ಕೇವಲ 8 ಕಿ.ಮೀ. ಲ್ಯಾಂಬ್ಸ್ ರಾಕ್ ನಿಂದ ಕಾಣುವ ಕೊಯಮತ್ತೂರು ಪ್ರದೇಶ ವಿಹಂಗಮವಾಗಿರುತ್ತದೆ.
ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗಲು ಇದು ಅತ್ಯುತ್ತಮವಾದ ಸ್ಥಳ. ತುದಿಯವರೆಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಸಾಕಷ್ಟು ಪ್ರಯತ್ನ ನಡೆಸಿದ ಕ್ಯಾಪ್ಟನ್ ಲ್ಯಾಂಬ್ ಹೆಸರನ್ನು ಈ ಸ್ಥಳಕ್ಕೆ ಇಡಲಾಗಿದೆ. ಡಾಲ್ಫಿನ್ ನೋಸ್ ಹೋಗುವ ದಾರಿಯಲ್ಲಿ ಅತ್ಯಾಕರ್ಷಕ ಲ್ಯಾಂಬ್ಸ್ ರಾಕ್ ಸಿಗುತ್ತದೆ.


Click it and Unblock the Notifications