ನೀಲಗಿರಿ ಚಹಾವನ್ನು ಉತ್ಪಾದಿಸುವ ಸಂಸ್ಥೆಗಳಲ್ಲಿ ಪ್ರಮುಖವಾದದ್ದು ಗೆರ್ನಸೆ ಟೀ ಫ್ಯಾಕ್ಟರಿ. ಇಲ್ಲಿನ ಪ್ರಸಿದ್ಧ ಚಹಾವನ್ನು ಸೇವಿಸದೆ ನೀಲಗಿರಿ ಪ್ರವಾಸ ಪೂರ್ತಿಯಾಗುವುದಿಲ್ಲ. ಇಲ್ಲಿ ಸಿಗುವಂಥ ವಿಶಿಷ್ಟ ಬಗೆಯ ಚಹಾ ಇಡೀ ಜಗತ್ತಿನಲ್ಲಿ ಎಲ್ಲೂ ಸಿಗುವುದಿಲ್ಲ. ಫ್ಯಾಕ್ಟರಿಯಲ್ಲಿ ತಯಾರಾಗುವ ತಾಜಾ ಟೀ ಪೌಡರನ್ನು ಕೊಳ್ಳಬಹುದು ಅಥವಾ ಫ್ಯಾಕ್ಟರಿಯಲ್ಲೇ ತಯಾರಿಸುವ ಚಹಾವನ್ನೂ ಆಸ್ವಾದಿಸಬಹುದು.
ಈ ಫ್ಯಾಕ್ಟರಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಕೆಲಸದ ವೇಳೆ ಬೆಳಿಗ್ಗೆ 8ರಿಂದ ಸಂಜೆ ಆರು. ಕಚ್ಚಾ ಪದಾರ್ಥದಿಂದ ಚಹಾ ತಯಾರಿಕೆಯ ಆರಂಭದ ಹಂತದಿಂದ ಚಹಾ ತಯಾರಿಸುವ ಕೊನೆಯ ಹಂತದವರೆಗೆ ಪ್ರವಾಸಿಗರು ಎಲ್ಲ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಪ್ರವಾಸಿಗರು ಪ್ರವೇಶಿಸಲು ಇಲ್ಲಿ ಕನಿಷ್ಠ ಮೊತ್ತವನ್ನು ಪಾವತಿಸಬೇಕು ಮತ್ತು ಚಹಾ ತಯಾರಿಕೆಯ ಎಲ್ಲ ಹಂತಗಳ ಬಗ್ಗೆ ಮಾಹಿತಿ ಪಡೆಯಬಹುದು.


Click it and Unblock the Notifications