ಹೆಸರೇ ಹೇಳುವಂತೆ ಡಾಲ್ಫಿನ್ ನೋಸ್ ಎಂಬುದು ಡಾಲ್ಫಿನ್ ಮೂಗಿನಂತೆ ಕಾಣುವ ಶಿಖರದ ತುದಿ. ಇಲ್ಲಿನ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲವಾದ್ದರಿಂದ ಕುಣ್ಣೂರಿಗೆ ಭೇಟಿ ನೀಡುವವರು ಡಾಲ್ಫಿನ್ ನೋಸ್ ಗೆ ಭೇಟಿ ನೀಡಲೇಬೇಕು. ಇಲ್ಲಿ ಚಾರಣ ಮಾಡಬೇಕಾಗಬಹುದು. ಆದರೆ, ಆ ಸೌಂದರ್ಯ ಸವಿಯಬೇಕಾದರೆ ಸ್ವಲ್ಪ ಕಷ್ಟಪಡಲೇಬೇಕು. ಇದರ ತುದಿಯಿಂದ ಕ್ಯಾಥರಿನ್ ಫಾಲ್ಸ್ ಸೇರಿದಂತೆ ನೀಲಗಿರಿಯ ಅನೇಕ ಪ್ರದೇಶಗಳನ್ನು ಕಾಣಬಹುದು. ಕ್ಯಾಥರಿನ್ ಎಂಬುದು ನೀಲಗಿರಿ ಜಿಲ್ಲೆಯ ಮತ್ತೊಂದು ಗಿರಿಧಾಮ.
ಆದರೆ, ಬೆಟ್ಟದ ತುದಿ ತಲುಪಿದಾಗ ನಿಮ್ಮ ಹೆಜ್ಜೆಗಳ ಮೇಲೆ ನಿಗಾ ಇರಲಿ. ಏಕೆಂದರೆ, ಬಂಡೆಗಲ್ಲಿನ ಎರಡೂ ತುದಿಯಲ್ಲಿ ಆಳ ಪ್ರಪಾತವಿದೆ. ಈ ತುದಿಯಿಂದ ಕಾಣುವ ನೋಟ ಕಣ್ಣಿಗೆ ಹಬ್ಬ. ಕುಣ್ಣೂರಿನಿಂದ ಡಾಲ್ಫಿನ್ ನೋಸ್ ಪಾಯಿಂಟ್ 10-12 ಕಿ.ಮೀ. ದೂರದಲ್ಲಿದೆ ಮತ್ತು ಟೈಗರ್ ಹಿಲ್ಸ್ ಬಳಿಯಿದೆ.


Click it and Unblock the Notifications