ಚುರಾಚಂದ್ಪುರ್ ನಿಂದ ಸುಮಾರು ಒಂಭತ್ತು ಕಿ.ಮೀ ದೂರವಿರುವ ನಗ್ಲೋಯಿಮೋಲ್ ಎಂದೂ ಕರೆಯಲ್ಪಡುವ ನಗ್ಲೋಯಿ ಗ್ರಾಮದಲ್ಲಿರುವ ಈ ಜಲಪಾತ ತನ್ನ ಸ್ಪಟಿಕಶುಭ್ರ ನೀರಿನ ಧಾರಿಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ತಲುಪಲು ಚುರಾಚಂದ್ಪುರ್ ನಿಂದ ಹಲವು ವಾಹನಗಳು ದೊರಕುತ್ತವೆ. ಜಲಪಾತದ ಸುತ್ತಮುತ್ತದ ದಟ್ಟಹಸಿರಿನ ಪರಿಸರ ಹಾಗೂ ಜಲಪಾತದ ಅಷ್ಟೇನೂ ಹೆಚ್ಚಿಲ್ಲದ ಅಬ್ಬರದ ಸದ್ದು ಪ್ರವಾಸಿಗರನ್ನು ಹೆಚ್ಚು ಹೊತ್ತು ಕಳೆಯಲು ಪ್ರೇರೇಪಿಸುತ್ತವೆ.


Click it and Unblock the Notifications