Search
  • Follow NativePlanet
Share
ಮುಖಪುಟ » ಸ್ಥಳಗಳು » ಚೂರಚಂದ್ಪೂರ್ » ಹವಾಮಾನ

ಚೂರಚಂದ್ಪೂರ್ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ನಡುವೆ ವಾತಾವರಣ ತಂಪಾಗಿದ್ದು ಅಣೆಕಟ್ಟು ಮತ್ತು ಜಲಪಾತಗಳಲ್ಲಿ ನೀರು ಭರ್ತಿಯಾಗಿರುವ ಕಾರಣ ನಿಸರ್ಗ ಸೌಂದರ್ಯ ತನ್ನ ಉತ್ತುಂಗದಲ್ಲಿರುತ್ತದೆ. ರಸ್ತೆಗಳೂ ಉತ್ತಮವಾಗಿದ್ದು ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತವಾಗಿದೆ. ಸುತ್ತಮುತ್ತಲ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತವೆ. ಈ ಸಮಯ ಭೇಟಿಗೆ ಅತ್ಯಂತ ಸೂಕ್ತವಾಗಿದೆ.

ಬೇಸಿಗೆಗಾಲ

 ಮಾರ್ಚ್ ನಿಂದ ಜೂನ್ ಎರಡನೇ ವಾರದವೆಗೂ ಬೇಸಿಗೆಯಾಗಿದ್ದು ತಾಪಮಾನ 37 ಡಿಗ್ರಿ ಸೆಲ್ಸಿಯಸ್ ವರೆಗೂ ಇರುತ್ತದೆ.

ಮಳೆಗಾಲ

ಇಡಿಯ ಮಣಿಪುರದಲ್ಲಿ ಜೂನ್ ಎರಡನೇ ವಾರದಿಂದ ಸೆಪ್ಟೆಂಬರ್ ಕಡೆಯವರೆಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತದೆ. ಚುರಾಚಂದ್ಪುರ್ ನ ವಾರ್ಷಿಕ ಸರಾಸರಿ ನೂರಿಪ್ಪತ್ತು ಇಂಚು ಮಳೆಯಾಗುತ್ತದೆ. ಭಾರೀ ಮಳೆಯ ಕಾರಣ ಸಂಚಾರದಲ್ಲಿ ತೊಡಕುಗಳು ಇಲ್ಲಿ ಸಾಮಾನ್ಯ.

ಚಳಿಗಾಲ

ಅಕ್ಟೋಬರ್ ನಿಂದ ಚಳಿಗಾಲ ಪ್ರಾರಂಭವಾದರೂ ನವೆಂಬರ್ ಮೊದಲ ವಾರದಿಂದ ತಾಪಮಾನದಲ್ಲಿ ಇಳಿಕೆ ಕಂಡುಬರುತ್ತದೆ. ಆದರೆ ಹತ್ತು ಡಿಗ್ರಿ ಸೆಲ್ಸಿಯಸ್ ಗಿಂತ ಕೆಳಗಿಳಿಯದ ತಾಪಮಾನ ಫೆಬ್ರವರಿಯವರೆಗೂ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ. ಚಳಿಯ ಉಡುಪುಗಳು ಈ ಸಮಯದಲ್ಲಿ ಸೂಕ್ತವಾಗಿದೆ.