ನಟರಾಜ ಅಥವಾ ಶಿವ ಮತ್ತು ಪೆರುಮಾಳನಿಗೆ ಸಮರ್ಪಿತವಾದ ಈ ನಟರಾಜ ದೇವಾಲಯವನ್ನು 11 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. 40 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ದೇವಾಲಯವು ದ್ರಾವಿಡಿಯನ್ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ದಕ್ಷಿಣ ಭಾರತದ ಪ್ರಖ್ಯಾತ ಶೈವ ದೇವಸ್ಥಾನಗಳ ಪೈಕಿ ಇದು ಒಂದಾಗಿದೆ. ವಿಕ್ರಮ ಚೋಳ ರಾಜನಿಂದ ನಿರ್ಮಿತವಾದ ಈ ದೇವಸ್ಥಾನವನ್ನು ಪಲ್ಲವ ದೊರೆ ಸಿಂಹವರಂ ಮರು ನಿರ್ಮಾಣ ಮಾಡಿದನು.
ನಾಲ್ಕು ಬೃಹತ್ ಗೋಪುರಗಳನ್ನು ಈ ದೇವಾಲಯ ಹೊಂದಿದೆ. ಪೂರ್ವಕ್ಕಿರುವ ಗೋಪುರವು ಪ್ರವೇಶ ದ್ವಾರವಾಗಿದೆ. ದೇವಸ್ಥಾನದ ನೃತ್ಯಾಂಗಣವು ವಿಶಾಲವಾಗಿದ್ದು ಪ್ರಮುಖ ಆಕರ್ಷಣೆಯಾಗಿದೆ. ವಾಸ್ತು ಶಿಲ್ಪಶೈಲಿಯನ್ನು ಇಷ್ಟ ಪಡುವವರು ಖಂಡಿತವಾಗಿಯೂ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು.


Click it and Unblock the Notifications