ಇಂದ್ರಗಢ ಕೋಟೆಯು ಇಂದ್ರಸಾಲ್ ಸಿಂಗ್ ಹಾಡಾರಿಂದ 17ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಬುಂದಿಯಿಂದ ಸುಮಾರು 77 ಕಿ.ಮೀ ದೂರದಲ್ಲಿ ಈ ಪ್ರದೇಶವಿದೆ. ಗುಡ್ಡದ ಸಮೀಪ ಈ ಕೋಟೆಯಿದ್ದು, ನಾಲ್ಕು ಗೇಟುಗಳು ಮತ್ತು ಭಾರಿ ಗಾತ್ರದ ಗೋಡೆಗಳ ವಿಶಿಷ್ಟ ರಚನೆಯಿಂದ ಹೆಸರುವಾಸಿಯಾಗಿದೆ. ಈ ಸುಂದರ ಕೋಟೆಯ ಒಳಗಡೆ ಮೂರು ಅರಮನೆಗಳಿದ್ದು ಇವುಗಳನ್ನು, ಜನನ ಮಹಲ್, ಸುಪಾರಿ ಮಹಲ್ ಮತ್ತು ಹವಾ ಮಹಲ್ ಎಂದು ಕರೆಯಲಾಗಿದೆ.
ಎಲ್ಲಾ ಮಹಲುಗಳು ಸುಂದರವಾದ ಗೋಡೆ ಪೇಂಟಿಂಗ್‌ಗಳನ್ನು ಹೊಂದಿವೆ. ಕಮಲೇಶ್ವರ ಮತ್ತು ಕಾಳಿ ಮಾತೆಯ ದೇವಸ್ಥಾನವು ಇಂದ್ರಗಢ ಕೋಟೆಯ ಸಮೀಪವಿದೆ.


Click it and Unblock the Notifications