ಜಾಮಾ ಮಸೀದಿ ಭೋಪಾಲ್ ನ ಒಂದು ಅತ್ಯುನ್ನತ ಸ್ಮಾರಕವಾಗಿದ್ದು ಇದರ ನಿರ್ಮಾಣ ಬಹಳ ಹಿಂದೆ ಕ್ಯುದಿಸಿಯಾ ಬೇಗಂ ನ ಅವಧಿಯಲ್ಲಾಗಿತ್ತು. ಇದು ಸಣ್ಣ ಸ್ಥಳದಲ್ಲಿದ್ದರೂ ಇಲ್ಲಿನ ಅತ್ಯಾಕರ್ಷಕ ನಿರ್ಮಾಣ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿಗೆ ಧರ್ಮದ ಭೇದವಿಲ್ಲದೆ ಎಲ್ಲಾ ಧರ್ಮದ ಜನರು ಭೇಟಿ ನೀಡುತ್ತಾರೆ ಇಲ್ಲಿನ ವಿನ್ಯಾಸ ಮತ್ತು ರಚನೆಗೆ ಧರ್ಮ ಭೇದವಿಲ್ಲದೆ ಜನ ಆಕರ್ಷಿತರಾಗುತ್ತಾರೆ. ಇಲ್ಲಿನ ಎರಡು ಮುಖ್ಯ ಆಕರ್ಷಣೆಗಳೆಂದರೆ ಇಲ್ಲಿನ ಎರಡು ದೊಡ್ಡ ಸ್ತಂಭಗಳು ಇವು ಬಹಳ ದೂರದ ವರೆಗೆ ಕಾಣಿಸುತ್ತವೆ.
ಇದು ಇಸ್ಲಾಂ ವಾಸ್ತುಶಿಲ್ಪದ ಶ್ರೇಷ್ಠತೆಗೆ ಒಂದು ಉದಾಹರಣೆಯಾಗಿದೆ. ಇಲ್ಲಿನ ಆರ್ಕ್ ಗಳು ಮತ್ತು ಬಿಳಿ ಬಣ್ಣದ ಸ್ತಂಭಗಳು ಈ ಮಸೀದಿಯ ಮುಖ್ಯ ಅಂಶಗಳು. ಇದು ಇಲ್ಲಿನ ಸ್ಥಳೀಯರಿಗೆ ಬಹಳ ಪವಿತ್ರವಾದ ಸ್ಥಳವಾಗಿದ್ದು ಪ್ರತಿ ದಿನ ಅದರಲ್ಲೂ ಮುಖ್ಯವಾಗಿ ಶುಕ್ರವಾರದಂದು ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.


Click it and Unblock the Notifications