ವಿಕ್ಟೋರಿಯಾ ಆಣೆಕಟ್ಟು 40 ಅಡಿ ಎತ್ತರವಾಗಿದೆ. ಭೀಮತಲ ಕೆರೆಗೆ ಇದನ್ನು ನಿರ್ಮಿಸಲಾಗಿದೆ. ಆಣೆಕಟ್ಟಿನ ಎರಡೂ ಕಡೆಗಳಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ಇದರ ಜತೆ ಆಣೆಕಟ್ಟಿನ ಸಹಜ ಸೌಂದರ್ಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಇದರ ಸುತ್ತಲೂ ಹುಟ್ಟಿಕೊಂಡು ಅರಳಿರುವ ಕಾಡು ಹೂಗಳು ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಹಿಂದುಗಳ ಆರಾಧ್ಯ ದೈವ ಶಿವನಿಗೆ ಮೀಸಲಾಗಿರುವ ಭೀಮೇಶ್ವರ ದೇವಾಲಯವು ಈ ಆಣೆಕಟ್ಟಿನ ಪಕ್ಕದಲ್ಲಿದೆ.


Click it and Unblock the Notifications