ಕುದುರೆಮುಖ ಮತ್ತು ಗಂಗಾಮೂಲದಿಂದ ಹುಟ್ಟುವ ಭದ್ರಾ ನದಿಯು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ಸಾಲಿನಲ್ಲಿ ಹಾವಿನಂತೆ ಬಳುಕುತ್ತ ಪ್ರಶಾಂತವಾಗಿ ಹರಿಯುವುದನ್ನು ನೋಡುವುದೇ ಒಂದು ಸೌಭಾಗ್ಯವೆನ್ನಬಹುದು. ಪೂರ್ವ ದಿಕ್ಕಿಗೆ ಹರಿಯುವ ಭದ್ರಾ ನದಿಯು ತಡಬೆಹಳ್ಳ, ಸೋಮವಾಹಿನಿ, ಹೆಬ್ಬೆ ಮತ್ತು ಒಡಿರಾಯನಹಳ್ಳದೊಂದಿಗೆ ಒಳಗೊಂಡಿದೆ.
ಲಕ್ಕವಳ್ಳಿ ಬಳಿ ಭದ್ರಾ ನದಿಗೆ ಅಣ್ಣೆಕಟ್ಟು ನಿರ್ಮಿಸಲಾಗಿದ್ದು, ಪ್ರವಾಸಿಗರು ಈ ಸ್ಥಳಕ್ಕೂ ಭೇಟಿ ನೀಡಬಹುದಾಗಿದೆ. ಇಲ್ಲಿಂದ ರಭಸವಾಗಿ ಹರಿಯುವ ಭದ್ರಾವತಿ ಮೂಲಕ ಹರಿಯುವ ಭದ್ರಾ ನದಿಯು ಶಿವಮೊಗ್ಗದ ಬಳಿಯ ಕೂಡ್ಲಿ ಹತ್ತಿರ ತುಂಗಾ ನದಿಯಲ್ಲಿ ಸೇರುತ್ತದೆ. ಅಲ್ಲಿಂದ ಹರಿಯುತ್ತ ತುಂಗಭದ್ರಾ ನದಿ ಎಂದು ಕರೆಯಿಸಿಕೊಳ್ಳುತ್ತಿದೆ.


Click it and Unblock the Notifications