Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ತಪ್ತಪಾನಿ

ತಪ್ತಪಾನಿ, ಬ್ರಹ್ಮಪುರ

1

ತಪ್ತಪಾನಿ ಎಂದರೆ ಅಕ್ಷರಶಃ ಕುದಿಯುವ ನೀರು.  ತಪ್ತಾಪಾನಿ ಬೆರ್ಹಾಮ್‍ಪೂರಿನಿಂದ 50 ಕಿ.ಮೀ. ದೂರದಲ್ಲಿರುವ ಒಂದು ಬಿಸಿನೀರಿನ ಚಿಲುಮೆ ಅಥವಾ ಬುಗ್ಗೆ. ಪ್ರಾಕೃತಿಕ ಬಿಸಿನೀರಿನ ಬುಗ್ಗೆಗಳ ಸಂಖ್ಯೆಯು ಭೂಮಿಯಮೇಲೆ ಎಣಿಸಬಹುದಷ್ಟೇ ಇದ್ದರೂ ಬಹಳಷ್ಟು ಬುಗ್ಗೆಗಳನ್ನು ತಲುಪಲು ಸಾಧ್ಯವಿಲ್ಲ.  ತಪ್ತಾಪಾನಿಯ ಬಳಿ ಹೋಗಿ ಮಿಂದುಬರಲು ಅವಕಾಶವಿದೆ. ಬೆಚ್ಚಗಿನ ನೀರಲ್ಲಿ ಮಿಂದು ಬಂದವರಾದ ಪ್ರವಾಸಿಗಳಿಗೆ ವೈಯುಕ್ತಿಕ ಅನುಭವ ಸಿಗುತ್ತದೆ. ತಪ್ತಾಪಾನಿಯ ನೀರಿನಲ್ಲಿ ಅಧಿಕವಾದ ಗ್ರಂಧಕವಿರುವುದರಿಂದ ಅಲ್ಲಿನ ನೀರು ಔಷಧೀಯ ಗುಣಗಳನ್ನು ಹೊಂದಿದೆಯೆಂದು ನಂಬಲಾಗಿದೆ. ಇದರಲ್ಲಿ ನಂಬಿಕೆಯಿರುವವರು ದೇಶಾದ್ಯಂತದಿಂದ ತಮ್ಮ ಮೈನೋವು, ಚರ್ಮರೋಗಗಳಾದ ಇಸ್ಬು (ಎಕ್ಜೀಮಾ), ತುರಿಕಜ್ಜಿ ನಿವಾರಣೆಗಾಗಿ ಈ ಸ್ಥಳವನ್ನು ಹುಡುಕಿಕೊಂಡು ಬರುತ್ತಾರೆ.

ತಪ್ತಪಾನಿಯು ಈ ಸ್ಥಳದಲ್ಲಿರುವುದರಿಂದ ಬೆರ್ಹಾಮ್‍ಪೂರಿನ ಪ್ರವಾಸೊದ್ಯಮದ ಅಭಿವೃದ್ಧಿಗೆ ಮತ್ತೊಂದು ಕಾರಣವಾಗಿದೆ. ಬಿಸಿನೀರಿನ ಚಿಲುಮೆಯು ಸಮುದ್ರ ಮಟ್ಟದಿಂದ 1800 ಅಡಿ ಎತ್ತರದಲ್ಲಿ ಪೂರ್ವ ಘಟ್ಟಗಳ ಮಧ್ಯೆ ನೆಲೆಸಿದೆ.  ಇದರ ಸಮೀಪದಲ್ಲಿ ಈಶ್ವರ ಮತ್ತು ಬುಡಕಟ್ಟಿನವರ ಗ್ರಾಮ ದೇವತೆ ಕಂಡಿ ಮಾತಾ ದೇವಾಲಯಗಳಿವೆ. ಬಿಸಿನೀರಿನ ಚಿಲುಮೆಯಿಂದ 5 ಕಿ.ಮೀ. ದೂರದಲ್ಲಿ ಸರ್ಕಾರದವರು ನಿರ್ವಹಿಸುತ್ತಿರುವ ಜಿಂಕೆ ಪಾರ್ಕ್ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed