ವಿಶ್ವಪ್ರೇಮ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದ ಪ್ರಸಿದ್ದ ಸೂಫೀ ಸಂತ ಹಾಜಿ ವರಿಸ್ ಅಲಿ ಶಾಹ್ ಅವರ ನೆಲೆ ಇರುವುದು ದೇವಾದಲ್ಲಿ. ಇವರ ನೆನಪಿನಲ್ಲಿ ಅತಿರಂಜಿತ ಸ್ಮಾರಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಸ್ಮಾರಕ ಮೇಲೆದ್ದು ನಿಂತಿರುವ ಸ್ಥಳದಲ್ಲಿಯೇ ಸೂಫಿ ಸಂತರು ಮೃತಪಟ್ಟರೆಂಬ ನಂಬಿಕೆಯಿದೆ. ಅವರನ್ನು ಇದೇ ಸ್ಥಳದಲ್ಲಿ ಸಮಾಧಿ ಮಾಡಲಾಯಿತಾದರೂ ನಂತರ ಅವರ ಅನುಯಾಯಿಗಳು ನೆನಪನ್ನು ಜೀವಂತವಾಗಿರಸಲು ಸ್ಮಾರಕವನ್ನು ನಿರ್ಮಿಸಿದರು. ಪ್ರಸಿದ್ದವಾದ ನಗರವಾದರೂ ಪ್ರಶಾಂತವಾದ ಪ್ರವಾಸಿ ತಾಣವಿದು.


Click it and Unblock the Notifications