ರಾಮ ಕುಂಡವನ್ನು ಫಾತಿ ಖಾನ್ ಎಂದೂ ಕರೆಯಲಾಗುತ್ತದೆ. ಗುಡ್ಡದ ಮಧ್ಯೆ ಇರುವ ಆಳವಾದ ಕೊಳ ಇದು. ಎಲ್ಲಾ ಕಡೆಯಿಂದಲೂ ಈ ಕೊಳವನ್ನು ಗುಡ್ಡ ಸುತ್ತುವರಿದಿದೆ. ನಿಸರ್ಗಪ್ರಿಯರಿಗೆ ಇದು ಅತ್ಯಂತ ಆಕರ್ಷಕ ತಾಣ. ಇದರ ಸಮೀಪದಲ್ಲೇ ತಣ್ಣೀರಿನ ಕೊಳವೊಂದಿದೆ. ಇದು ಯಾವತ್ತೂ ನೀರಿಲ್ಲದಂತಾಗುವುದೇ ಇಲ್ಲ. ಜನರ ನಂಬಿಕೆಯ ಪ್ರಕಾರ ರಾಮ ದೇವನು ತನ್ನ ವನವಾಸದ ಅವಧಿಯಲ್ಲಿ ಈ ಪ್ರದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆದಿದ್ದಾನೆ ಎಂದು ಹೇಳಲಾಗುತ್ತದೆ. ಇದರಿಂದಾಗಿಯೇ ಇದಕ್ಕೆ ರಾಮ ಕುಂಡ ಎಂದು ಹೆಸರು ಬಂತು.


Click it and Unblock the Notifications