ಆರ್ಥುನಾ, ಬನ್ಸ್‌ವಾರಾದಲ್ಲಿ ಅತ್ಯಂತ ಪ್ರೇಕ್ಷಣೀಯ ಸ್ಥಳ. ಈ ಪ್ರದೇಶಕ್ಕೆ ಆರ್ಕಿಯಲಾಜಿಕಲ್ ಪ್ರಾಮುಖ್ಯತೆ ಇದೆ. 11 ಮತ್ತು 12ನೇ ಶತಮಾನದಲ್ಲಿ ನಿರ್ಮಿಸಿದ ಕಲಾತ್ಮಕ ದೇವಾಲಯಗಳನ್ನು ಇಲ್ಲಿ ನೀವು ನೋಡಬಹುದು. ಹಲವು ದೇವಸ್ಥಾನಗಳನ್ನು ಉತ್ಖನನದಿಂದ ಹೊರತೆಗೆಯಲಾಗಿದೆ. ಇದು ಭಾರತದ ಐತಿಹಾಸಿಕ ಐಶ್ವರ್ಯವನ್ನು ಇಂದಿಗೂ ಬಿಂಬಿಸುತ್ತಿದೆ. ಇಲ್ಲಿರುವ ಅಪಾರ ಪ್ರಮಾಣದ ದೇವಸ್ಥಾನಗಳನ್ನ ಪರಿಗಣಿಸಿ ಅರ್ಥುನಾವನ್ನು ಹಳೆಯ ಮತ್ತು ಭಿನ್ನಗೊಂಡ ದೇವಸ್ಥಾನಗಳ ಹಳ್ಳಿ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ಪಾರ್ಮರ್ ಆಡಳಿತಗಾರರ ರಾಜಧಾನಿಯಾಗಿತ್ತು.


Click it and Unblock the Notifications