ಮಂತ್ರಿ ಸ್ಕ್ವೇರ್ ಮಾಲ್, ಬೆಂಗಳೂರಿನ ಮಲ್ಲೇಶ್ವರಮ್ ನಲ್ಲಿರುವ ಸಂಪಿಗೆ ರಸ್ತೆಯ ಎಂ.ಎನ್. ಕಾಂಪ್ಲೆಕ್ಸ ಹತ್ತಿರದಲ್ಲಿದೆ. ಇದು ಖಂಡಿತವಾಗಿಯು ಭಾರತದ ಅತಿ ದೊಡ್ಡ ಮಾಲ್ ಆಗಿದ್ದು 1.5 ಮಿಲ್ಲಿಯನ್ ಚ.ಅಡಿ ಜಾಗ ಹೊಂದಿದೆ. ಶಾಪಿಂಗಗೆ, ಮನರಂಜನೆಗೆ ಸಾಲುಸಾಲಾಗಿ ಮಳಿಗೆಗಳನ್ನು ಹೊಂದಿದ್ದು, ಬೆಂಗಳೂರಿಗೆ ಗ್ಲೋಬಲ್ ಸಿಟಿ ಎಂಬ ಹೆಸರು ಬರಲು ಸಹಾಯಕವಾಗಿದೆ. ಬೆಂಗಳೂರಿನ ಇದೊಂದೆ ಮಾಲ್ ನಲ್ಲಿ ಲೈಫ್ ಸ್ಟೈಲ್, ರಿಲಯನ್ಸ್ ಟ್ರೆಂಡ್ಸ್, ಮಾರ್ಕ್ಸ್, ಶೊಪ್ಪರ್ಸ್ ಸ್ಟಾಪ್ ಮತ್ತು ಪ್ಯಾಂಟಾಲೂನ್ಸ್ ನ ಪ್ರತ್ಯೇಕ ಐದು ಶಾಖೆಗಳನ್ನು ಒಂದೇ ಸೂರಿನಡಿ ಕಾಣಬಹುದು. ಸೌಥ್ ಆಫ್ರಿಕಾದ ಬೆಂಟೆಲ್ ಅಸ್ಸೋಸಿಯೆಟ್ಸ್ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಕ್ಕೆ ಮಂತ್ರಿ ಮಾಲ್ ಹೆಸರುವಾಸಿಯಾಗಿದೆ. 250 ಕ್ಕೂ ಅಧಿಕ ಮಳಿಗೆಗಳಿದ್ದು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಉತ್ಪನ್ನಗಳು ದೊರಕುತ್ತವೆ. ತಿಂಡಿ ತಿನಿಸುಗಳ ಮಳಿಗೆಗಳಲ್ಲಿ 39 ಕ್ಕೂ ಅಧಿಕ ಆಯ್ಕೆಗಳಿದ್ದು, 4 ಪ್ರತ್ಯೇಕ ಉಪಹಾರಗೃಹಗಳು, 6 ಪರದೆಗಳ ಜೊತೆ 71 ಗೊಲ್ಡ್ ಕ್ಲಾಸ್ ಕೂಡುವ ಸಾಮರ್ಥ್ಯವುಳ್ಳ ಐನಾಕ್ಸ್ ಚಿತ್ರಮಂದಿರ ಕೂಡ ಇದೆ.ಇಲ್ಲಿ ವಾಲೆಟ್ ಮಾದರಿಯ ನಿಲುಗಡೆಯ ವ್ಯವಸ್ಥೆಯಿದ್ದು 2000ಕ್ಕೂ ಅಧಿಕ ಕಾರುಗಳನ್ನು ನಿಲ್ಲಿಸಬಹುದು. ಶಾಪಿಂಗ್, ಊಟ ಮತ್ತು ಮನರಂಜನೆಗಳಿಗೆ ಸಾಕಷ್ಟು ಅವಕಾಶಗಳನ್ನು ಇದು ಒದಗಿಸುತ್ತದೆ.


Click it and Unblock the Notifications