ಘೋರದೆಮ ಜಲಪಾತ ನೈಸರ್ಗಿಕ ಜಲಪಾತವಾಗಿದ್ದು, ಉದ್ಯಾನವನದಲ್ಲಿ ವರ್ಷವಿಡೀ ಹರಿಯುತ್ತದೆ. ಅನೇಕ ಭೌಗೋಳಿಕ ಪ್ರಕ್ರಿಯೆಗಳಿಂದ ಇದು ರೂಪುಗೊಂಡಿದೆ. ಬಾಂಧವಗಡ್ ಮೀಸಲಿನ ಅತ್ಯಂತ ಆಕರ್ಷಣೀಯ ತಾಣ ಇದಾಗಿದೆ. ಜಲಪಾತದ ನೀರಿನ ಸದ್ದು ಮತ್ತು ಕಾಡಿನ ಪಕ್ಷಿ ಹಾಗೂ ಇತರ ಕೀಟಗಳ ಸದ್ದು ಇಲ್ಲೊಂದು ವಿಶೇಷ ಲೋಕವನ್ನೇ ಸೃಷ್ಟಿಸಿಬಿಡುತ್ತದೆ.
ಬಾಂಧವಗಡ್ ನಲ್ಲಿ ಇದೆನ್ನೆಲ್ಲಾ ಹೊರತುಪಡಿಸಿ ಘೋರದೆಮ ಜಲಪಾತಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ದೈನಂದಿನ ಜಂಜಾಟದಿಂದ ಬೇಸತ್ತಿರುವವರು ಇಲ್ಲಿಗೊಮ್ಮೆ ಭೇಟಿ ನೀಡಿದರೆ ಮನಸ್ಸು ಪ್ರಶಾಂತವಾಗುತ್ತದೆ. ಈ ಜಲಪಾತಕ್ಕೆ ಭೇಟಿ ನೀಡದೇ ಇದ್ದರೆ ಬಾಂಧವಗಡ್ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಫೋಟೊಗ್ರಾಫರ್ ಗಳು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು.


Click it and Unblock the Notifications