Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಜುನಾ » ಆಕರ್ಷಣೆಗಳು » ಪ್ಯಾರಡೈಸೊ

ಪ್ಯಾರಡೈಸೊ, ಅಂಜುನಾ

1

ನೀವೇನಾದರೂ ಅತಿ ಹುಮ್ಮಸ್ಸಿನಿಂದ ಪಾರ್ಟಿ ಮಾಡಬಯಸುವ ವ್ಯಕ್ತಿಯಾಗಿದ್ದರೆ, ಉತ್ತರ ಗೋವಾದ ಅಂಜುನಾ ಮತ್ತು ವಾಗಾತೋರ್ ಬೀಚ್ ಗೆ ಹತ್ತಿರವಿರುವ ಪ್ಯಾರಡೈಸೊಗೆ ಭೇಟಿ ನೀಡಿ. ನಿಮ್ಮ ಆದ್ಯತೆಗಳಿಗೆ ತಕ್ಕುದಾಗಿರುವ ಈ ತಾಣ ಬಾಗಾ ಬೀಚ್ ಗೂ ಹತ್ತಿರದಲ್ಲಿದ್ದು ಸ್ವಲ್ಪ ಉತ್ತರಕ್ಕಿದೆ. ಅಕ್ಷರಶಃ ಇದೊಂದು ಕುಪ್ರಸಿದ್ಧ ತಾಣವಾಗಿದ್ದು ಹಲವು ಬಗೆಯ ಮದ್ಯಗಳು ಮತ್ತು ಧುಮ್ರಪಾನಗಳು ಇಲ್ಲಿ ದೊರೆಯುತ್ತವೆ. ಬಹುಸಂಖ್ಯೆಯಲ್ಲಿ ಪಾಶ್ಚಿಮಾತ್ಯರಿಂದ ಕೂಡಿರುವ ಈ ತಾಣವು ದಿನದ 24 ಘಂಟೆಯು ಪೋಲಿಸರ ಕಣ್ಗಾವಲಿನಲ್ಲಿರುತ್ತದೆ.ಒಂದೊಮ್ಮೆ ಸ್ಥಳೀಯ ಆಡಳಿತ ಇದನ್ನು ಮುಚ್ಚಲು ಪ್ರಯತ್ನಿಸಿದ್ದರೂ ಫಲಕಾರಿಯಾಗಿಲ್ಲ. ಈಗಲೂ ಕೂಡ ಇಲ್ಲಿ ನಿರಂತರವಾದ ಚಟುವಟಿಕೆಗಳನ್ನು ಕಾಣಬಹುದು. ಇದರಲ್ಲಿ 4 ಭಾಗಗಳಿದ್ದು ಪ್ರತಿಯೊಂದು ಭಾಗದಿಂದಲೂ ಸಹ ವಿವಿಧ ಭಂಗಿಯ ಸಮುದ್ರ ತೀರದ ನೋಟವು ಅದ್ಭುತವಾಗಿ ಗೋಚರಿಸುತ್ತದೆ. ಈ ನಡುವೆ ಡಿಜೆ ಸಂಗೀತವು ಸದಾ ಹರಿಯುತ್ತಿರುತ್ತದೆ.ಇಲ್ಲಿನ ಮುಖ್ಯ ಅಂಗಳದಲ್ಲಿ LED ಲೈಟಿನಿಂದ ನಿರ್ಮಾಣವಾದ ಭಗವಾನ್ ಶಿವನ ಪ್ರತಿಮೆಯಿದ್ದು, ಅದು ಹಿಪ್ಪಿಗಳ ಸಂಬಂಧದ ಪ್ರತೀಕವನ್ನು ಸೂಚಿಸುತ್ತದೆ. ಕುಖ್ಯಾತಿಯನ್ನು ಪಡೆದಿರುವ ಈ ತಾಣವನ್ನು ಅದರಲ್ಲಿ ನಡೆಯುವ ಅಹಿತಕರ ಚಟುವಟಿಕೆಗಳಿಂದ ದೂರವಿದ್ದು, ಕೇವಲ ಅಲ್ಲಿ ಆನಂದಿಸಬಹುದಾದ ಸಂಗೀತ ಮತ್ತು ಕಡಲ ತೀರದ ನೋಟಗಳಿಗೆ ಭೇಟಿ ನೀಡಬಹುದು. ಇನ್ನು ಇಲ್ಲಿಗೆ ತಲುಪಲು ವಾಗಾತೋರ್ ಅಥವಾ ಅಂಜುನಾ ಬೀಚ್ ನಲ್ಲಿ ಯಾರಿಗಾದರು ವಿಚಾರಿಸಿದರೆ ಸಾಕು. ನೀವೇನಾದರು ಸ್ವಂತ ಅಥವಾ ಬಾಡಿಗೆ ವಾಹನ ಹೊಂದಿದ್ದಲ್ಲಿ ಇನ್ನೂ ಉತ್ತಮ. 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed