Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗೋಬಿಂದಘರ್ ಕೋಟೆ

ಗೋಬಿಂದಘರ್ ಕೋಟೆ, ಅಮೃತಸರ್

1

ಮೂಲತಃವಾಗಿ ಭಂಗಿಯಾನ್ ದಾ ಕಿಲಾ ಎಂದೇ ಹೆಸರುವಾಸಿಯಾಗಿದ್ದ ಅಮೃತಸರದಲ್ಲಿನ ಗೋಬಿಂದಘರ್ ಕೋಟೆ ಭೇಟಿ ಕೊಡಲೇಬೇಕಾದ ಸ್ಥಳ. 1760ರಲ್ಲಿ ಮಿಸಿಯ ಗುಜ್ಜರ್ ಸಿಂಗ್ ಭಂಗಿಯ ಸೈನ್ಯ ಈ ಕೋಟೆಯನ್ನು ಇಟ್ಟಿಗೆ ಹಾಗು ಸುಣ್ಣ ಬಳಸಿ ಕಟ್ಟಿದರು. ಇದು 4 ದೊಡ್ಡ ಬುರುಜುಗಳನ್ನು, 2 ಬಲಿಷ್ಠ ಕಬ್ಬಿಣದ ದ್ವಾರಗಳನ್ನು, ಮಜಬೂತಾದ ಕೋಟೆಯ ರಕ್ಷಣಾ ಗೋಡೆಯನ್ನು ಹೊಂದಿದೆ. 1805-1809ರಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ಕೋಟೆಯನ್ನು ಮತ್ತೆ ಕಟ್ಟಿಸಿದ.

1849ರಲ್ಲಿ ಬ್ರಿಟಿಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಇದಕ್ಕೆ ದರ್ಬಾರ್ ಹಾಲ್, ಹವಾ ಮಹಲ್ ಮತ್ತು ಫಾಂಸಿಘರ್ ಸೇರಿಸಿದರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಖಂಡನೀಯ ಆದೇಶವನ್ನು ಹೊರಡಿಸಿದ ಜನರಲ್ ಡಯರ್ ಮನೆಯು ಫಾಂಸಿಘರ್ ಎದುರಿಗೆ ಇತ್ತು ಎಂದು ಹೇಳಲಾಗಿದೆ. ಸೆರೆಯಾಳುಗಳನ್ನು ಮರಣದಂಡನೆ ಶಿಕ್ಷೆಗೆ ಗುರಿಯಾಗಿಸುತ್ತಿದ್ದನ್ನು ವೀಕ್ಷಿಸುವುದು ಅವನಿಗೆ ಸಂತೋಷ ಕೊಡುತ್ತಿತ್ತಂತೆ.

ಸ್ವಾತಂತ್ರ್ಯ ಬಂದ ನಂತರ, ಭಾರತದ ಸೈನ್ಯ 1948ನೇ ಇಸ್ವಿಯಲ್ಲಿ ಕೋಟೆಯನ್ನು ತನ್ನ ಹತೋಟಿಗೆ ತೆಗೆದುಕೊಂಡಿತು. ತಾತ್ಕಾಲಿಕ ರಕ್ಷಣೆಯನ್ನು ಪಾಕಿಸ್ತಾನದಿಂದ ವಲಸೆ ಬಂದವರಿಗೆ ಕೊಡಲು ಉಪಯೋಗಿಸಲಾಗಿತ್ತು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅನೇಕ ಐತಿಹಾಸಿಕ ಘಟನೆಗಳಿಗೆ ಈ ಕೋಟೆ ಮೂಕ ಸಾಕ್ಷಿಯಾಗಿತ್ತು. ಗೋಬಿಂದಘರ್ ಕೋಟೆಯನ್ನು ಸಾರ್ವಜನಿಕರಿಗೆ 2006ರಲ್ಲಿ ಆಗಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಸಿಂಗ್ ತೆರೆದರು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed