ಅಂಬೆ ವ್ಯಾಲಿಯ ಈ ಸರೋವರ ನೀರಿನ ಆಟಗಳು ಮತ್ತಿತರೆ ಜಲ ಆಕರ್ಷಣೆಗಳನ್ನು ಹೊಂದಿರುವ ಒಂದು ಪ್ರಮುಖ ಸರೋವರ. ಜೆಟ್ ಸ್ಕೈ ಬಾಡಿಗೆಗೆ ಪಡೆದು ಹದಿನೆಂಟನೆಯ ಶತಮಾನದ ಹಡಗಿನ ಪ್ರತಿರೂಪವಾದ ಲಿ ಬೊಂಬಾರ್ಡಾದ ಕಡೆಗೆ ಪ್ರಯಾಣ ಬೆಳೆಸಿ. ನಿಮಗೆ ನೀರಿನ ಆಟಗಳು ಇಷ್ಟವೆಂದಾದರೆ ನೀವು ಖಂಡಿತವಾಗಿಯೂ ಇಲ್ಲಿನ ದೋಣಿ ವಿಹಾರವನ್ನು ಇಷ್ಟಪಡುತ್ತೀರಿ. ನೀವು ಹಣ ಖರ್ಚು ಮಾಡಲು ಸಿದ್ಧರಿದ್ದಲ್ಲಿ ಲಿ ಬೊಂಬಾರ್ಡಾ ಹಡಗಿನಲ್ಲಿ ಭೋಜನವನ್ನೂ ಸವಿಯಬಹುದು. ಆದರೆ, ನೆನಪಿಡಿ ಖರ್ಚು ಜಾಸ್ತಿ ಆಗಬಹುದು.


Click it and Unblock the Notifications