ಅಲಹಾಬಾದ್ ವಿಶ್ವವಿದ್ಯಾಲಯ ಎಂದು ಪ್ರಸಿದ್ಧಿ ಹೊಂದಿರುವ ಈ ವಿವಿ ಭಾರತದ ಎಲ್ಲಾ ಹಳೆಯ ಆಂಗ್ಲ ಭಾಷೆಯ ವಿವಿಗಳಲ್ಲಿ ಒಂದು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಉತ್ತರ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ವಿಲಿಯಂ ಮುಯಿರ್ ಸೆಂಟ್ರಲ್ ಎಜ್ಯುಕೇಷನ್ ಇನ್‌ಸ್ಟಿಟ್ಯೂಟ್ ಆರಂಭಿಸುವ ಯೋಜನೆಗೆ ಚಾಲನೆ ನೀಡಿದರು. ಮುಯಿರ್ ಸೆಂಟ್ರಲ್ ಕಾಲೇಜು ಈತನೇ ಸ್ಥಾಪಿಸಿದ್ದು. ನಂತರ ಇದೇ ಅಲಹಾಬಾದ್ ವಿಶ್ವವಿದ್ಯಾಲಯ ಎಂದು ಖ್ಯಾತಿ ಪಡೆಯಿತು.
ಮೊದಲಿಗೆ ಈ ವಿಶ್ವವಿದ್ಯಾಲಯ ಕೋಲ್ಕತಾ ವಿವಿಯ ಅಡಿಯಲ್ಲಿ ಕೆಲಸ ಮಾಡುತ್ತಿತ್ತು. ಆದರೆ, 1887 ಇಸ್ವಿಯಲ್ಲಿ ಈ ವಿವಿ ಸ್ವತಂತ್ರ ವಿವಿಯಾಗಿ ಮಾನ್ಯತೆ ಪಡೆಯಿತು ಮತ್ತು ಭಾರತದ 4ನೇ ಆಧುನಿಕ ವಿವಿ ಎನ್ನುವ ಹಿರಿಮೆಗೆ ಕೂಡ ಪಾತ್ರವಾಯಿತು.
ಪ್ರಖ್ಯಾತ ಬ್ರಿಟಿಷ್ ವಾಸ್ತುಶಿಲ್ಪಿ ವಿಲಿಯಂ ಎಮರಸನ್ ಈ ವಿಶ್ವವಿದ್ಯಾಲಯದ ಕಟ್ಟಡವನ್ನು ಕಟ್ಟಿಸಿದ. ಕೋಲ್ಕತಾದಲ್ಲಿರುವ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಿಸಿದ ಕ್ರೆಡಿಟ್ ಸಹ ಇವನಿಗೆ ಸಲ್ಲುತ್ತದೆ. ಈ ವಿದ್ಯಾಸಂಸ್ಥೆಯ ಇಂಡೋ-ಸಾರಸೆನಿಕ್ ಇಜಿಪ್ಶಿಯನ್ ಮತ್ತು ಗೋಥಿಕ್ ಶೈಲಿಯ ವಿನ್ಯಾಸವನ್ನು ಕಟ್ಟಡ ಬಿಂಬಿಸುತ್ತದೆ.


Click it and Unblock the Notifications