ಶಿವರಾಜಪುರವು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿನ ಒಂದು ಸಣ್ಣ ಪಟ್ಟಣ. ಐತಿಹಾಸಿಕವಾಗಿ ಇಲ್ಲಿ ರಾಜ ಸತಿ ಪ್ರಸಾದನು ತನ್ನ ರಾಣಿಯ ನೆನಪಿಗೆ ಇಲ್ಲಿ ಸುಂದರ ದೇವಾಲಯವನ್ನು ಕಟ್ಟಿಸಿದ ನಂತರ ಇದು ಪ್ರಸಿದ್ಧವಾಯಿತು. ಈ ದೇವಾಲಯವು ಖೀಡೇಶ್ವರ ದೇವಾಲಯವೆಂದು ಹೆಸರಾಯಿತು. ಇದು ತನ್ನ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇದನ್ನು ಒಂದು ದಿನದಲ್ಲಿ ಕಟ್ಟಿ ಮುಗಿಸಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಗಂಗಾ ನದಿಯ ತಟದಲ್ಲಿದೆ. ಇಲ್ಲಿಗೆ ಸಮೀಪದಲ್ಲಿ ಇನ್ನೂ ಹಲವು ದೇವಾಲಯಗಳು ಮತ್ತು ಕಾಲೇಜುಗಳು ಇವೆ.


Click it and Unblock the Notifications