ಮನೆಕ್ ಚೌಕ್‍ಗೆ ಸಂತ ಬಾಬಾ ಮನೆಕ್ ನಾಥ್‍ರವರ ಹೆಸರನ್ನು ಇಡಲಾಗಿದೆ. . 15ನೇ ಶತಮಾನದಲ್ಲಿ ಅಂದರೆ ಅಹಮದ್ ಶಾರವರು ಕೋಟೆಯನ್ನು ನಿರ್ಮಿಸುತ್ತಿರುವಾಗ ಈ ಸಂತರು ಅದಕ್ಕೆ ತಮ್ಮ ಅಲೌಕಿಕ ಶಕ್ತಿಯಿಂದ ಅಡ್ಡಿಯನ್ನುಂಟು ಮಾಡುತ್ತಿದ್ದರಂತೆ. ಹೇಗೆಂದರೆ ಬೆಳಗಿನ ಹೊತ್ತು ಕೋಟೆಯನ್ನು ಕಟ್ಟುವಾಗ ಇವರು ಒಂದು ಚಾಪೆಯನ್ನು ನೇಯುತ್ತ ಇರುತ್ತಿದ್ದರಂತೆ. ರಾತ್ರಿ ಆ ನೇಯ್ದ ಚಾಪೆಯನ್ನು ಬಿಚ್ಚಿ ಬಿಡುತ್ತಿದ್ದರಂತೆ. ಆಗ ಅಂದು ನಿರ್ಮಿಸಿದ ಸಂಪೂರ್ಣ ಕೋಟೆಯು ಕುಸಿದು ಬೀಳುತ್ತಿತ್ತಂತೆ. ಈತನ ಬಗ್ಗೆ ಕೇಳಿದ ಅಹಮದ್ ಶಾನು ಈತನನ್ನು ತನ್ನ ಬಳಿಗೆ ಕರೆಸಿಕೊಂಡನಂತೆ. ಆಗ ಈ ಸಂತನಿಗೆ ಸಾಧ್ಯವಾದರೆ ಒಂದು ಬಾಟಲಿಯೊಳಗೆ ಹೋಗಿ ಸೇರಿಕೊಳ್ಳುವಂತೆ ಸೂಚಿಸಿದನಂತೆ. ಸಂತನ್ನು ರಾಜನು ಹೇಳಿದಂತೆ ಮಾಡಿ ತೋರಿಸಲು, ರಾಜ ಆ ಬಾಟಲಿಯನ್ನು ತೆಗೆದುಕೊಂಡು ಹೋಗಿ ಹೂತು ಹಾಕಿದನಂತೆ.
ಮನೆಕ್ ಚೌಕ್‍ನಲ್ಲಿ ಬೆಳಗ್ಗೆ ತರಕಾರಿ ಮಾರುಕಟ್ಟೆ ಸೇರಿದರೆ, ಮಧ್ಯಾಹ್ನ ಆಭರಣ ಮಾರುಕಟ್ಟೆಯು ಕೂಡುತ್ತದೆ. ಸಂಜೆಗೆ ಇಡೀ ಮಾರುಕಟ್ಟೆಯಲ್ಲಿ ಎಲ್ಲೆಲ್ಲಿಯೂ ಫಾಸ್ಟ್ ಫುಡ್ ಅಂಗಡಿಗಳು ಜಮಾಯಿಸುತ್ತವೆ. ಇಲ್ಲಿನ ಅಂಗಡಿಗಳಿಗೆ ಅಸಂಖ್ಯಾತ ಮಂದಿ ಗ್ರಾಹಕರು ಬರುತ್ತಾರೆ. ಹಾಗಾಗಿ ಇಲ್ಲಿ ಯಾವಾಗಲು ಜನಗಳ ಜಾತ್ರೆಯೆ ನೆರೆದಿರುತ್ತದೆ.


Click it and Unblock the Notifications