Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಕ್ಯಾಲಿಕೊ ವಸ್ತು ಸಂಗ್ರಹಾಲಯ ಮತ್ತು ಸಾರಾಭಾಯಿ ಪ್ರತಿಷ್ಠಾನ

ಕ್ಯಾಲಿಕೊ ವಸ್ತು ಸಂಗ್ರಹಾಲಯ ಮತ್ತು ಸಾರಾಭಾಯಿ ಪ್ರತಿಷ್ಠಾನ, ಅಹಮದಾಬಾದ್

1

ಕ್ಯಾಲಿಕೊ ವಸ್ತು ಸಂಗ್ರಹಾಲಯವು ಭಾರತದ ಜವಳಿ ವಸ್ತು ಸಂಗ್ರಹಾಲಯಗಳಲ್ಲಿಯೆ ಮೊಟ್ಟ ಮೊದಲನೆಯದಾಗಿದೆ. ಭಾರತದ ವೈವಿಧ್ಯಮಯ ಜವಳಿಯ ಶ್ರೀಮಂತ ಸಂಗ್ರಹವನ್ನು ಹೊಂದಿರುವ ಕಾರಣಕ್ಕೆ ಇದು ವಿಶ್ವಖ್ಯಾತಿಯನ್ನುಗಳಿಸಿದೆ.  ಹಲವಾರು ವಿನ್ಯಾಸ, ವರ್ಣ ಮತ್ತು ನಮೂನೆಯ ಬಟ್ಟೆಗಳನ್ನು ಭಾರತದ ವಿವಿಧೆಡೆಗಳಿಂದ ಸಂಗ್ರಹಿಸಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಶ್ರೀಮಂತ ಜವಳಿಯ ಇತಿಹಾಸ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಈ ಸಂಗ್ರಹಾಲಯವು ಹೇಳಿ ಮಾಡಿಸಿದ ಸ್ಥಳವಾಗಿದೆ. ಇದನ್ನು ಕ್ಯಾಲಿಕೊ ಹೌಸ್‍ನಲ್ಲಿ ಶ್ರೀ ಗೌತಮ್ ಸಾರಾಭಾಯ್ ಮತ್ತು ಅವರ ಸಹೋದರಿ ಗಿರಾ ಸಾರಾಭಾಯ್‍ರವರು 1949ರಲ್ಲಿ ಸ್ಥಾಪಿಸಿದರು. ಮುಂದೆ ಇದನ್ನು 1983ರಲ್ಲಿ ಇದನ್ನು ಶಹಿಬಾಗ್‍ನಲ್ಲಿನ ಇಂದು ನಾವು ಕಾಣುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.

ಶ್ರೀಮತಿ. ಸರಳಾದೇವಿ ಸಾರಾಭಾಯ್ ಮತ್ತು ಶ್ರೀ ಅಂಬಾಲಾಲ್ ಸಾರಾಭಾಯ್‍ರವರಿಂದ 1959ರಲ್ಲಿ ಸ್ಥಾಪನೆಗೊಂಡ ಸಾರಾಭಾಯ್ ಪ್ರತಿಷ್ಠಾನವು ಒಂದು ಸರ್ಕಾರೇತರ ಸಂಘ ಸಂಸ್ಥೆಯಾಗಿದೆ. ಇದು ವಿಜ್ಞಾನ, ಕಲೆ ಮತ್ತು ಸಾಹಿತ್ಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸ್ಥಾಪನೆ ಮಾಡಲಾಯಿತು. ಗುಜರಾತಿ ಹವೇಲಿ ವಾಸ್ತುಶೈಲಿಯಲ್ಲಿರುವ ಈ ಕಟ್ಟಡದಲ್ಲಿ ಕಲಾವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ. ಈ ಸಂಗ್ರಹಾಲಯಕ್ಕೆ ಬೇಟಿ ನೀಡುವುದರಿಂದ ಭಾರತದ ಕಲೆ, ಪರಂಪರೆ ಮತ್ತು ಇತರೆ ಅಂಶಗಳ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಳ್ಳಬಹುದು. ಈ ಸಂಸ್ಥೆಯವರು ಆಗಾಗ್ಗೆ ಈ ವಿಚಾರಗಳ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu