ವಿಶಾಖಪಟ್ಟಣಂನಲ್ಲಿನ ಯುದ್ಧ ಸ್ಮಾರಕವು ಜನಪ್ರಿಯವಾಗಿ ಸಮುದ್ರದಲ್ಲಿನ ವಿಜಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಇದು ರಾಮಕೃಷ್ಣ ಬೀಚ್ ಸಮೀಪದಲ್ಲಿದ್ದು, 1971ರ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಹೋರಾಡಿದ ಸೈನಿಕರ ಹಾಗೂ ಅವರು ತಂದುಕೊಟ್ಟ ವಿಜಯದ ನೆನಪಿಗಾಗಿ ಇದನ್ನು ಕಟ್ಟಲಾಗಿದೆ. 1996 ರಲ್ಲಿ ನೇವಲ್ ಕಮಾಂಡ್ ನಿಂದ ಸ್ಥಾಪಿತವಾದ ಈ ಸ್ಮಾರಕವು ಹಲವಾರು ಕ್ಷಿಪಣಿಗಳನ್ನು ಮತ್ತು ಬಾಂಬ್ ಗಳನ್ನು, ಒಂದು ಫೈಟರ್ ವಿಮಾನ ಮತ್ತು ಒಂದು ಟ್ಯಾಂಕ್ ಅನ್ನು ಹೊಂದಿದೆ. ಸ್ಮಾರಕವು ಕಾಂಕ್ರೀಟ್ ಗೋಡೆಯಿಂದ ಸುತ್ತುವರೆಯಲ್ಪಟ್ಟಿದ್ದು ಇದರ ಒಳಗೆ ಇಂಡಿಯಾ ಗೇಟ್ ನಲ್ಲಿನ ಅಮರ್ ಜವಾನ್ ಜ್ಯೋತಿಯ ಮಾದರಿಯಲ್ಲಿ ಒಂದು ಸುಂದರ ಗೋಪುರವನ್ನು ಮಾಡಲಾಗಿದೆ.


Click it and Unblock the Notifications