ರಾಜೀವ್ ಗಾಂಧಿ ಉದ್ಯಾನವು ವಿಜಯವಾಡಾದ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಪ್ರವಾಸಿಗರು ವಿಜಯವಾಡಾವನ್ನು ಪ್ರವೆಶಿಸುತ್ತಿದ್ದಂತೆಯೇ ಈ ಉದ್ಯಾನಕ್ಕೆ ಭೇಟಿ ನೀಡಿ ಇಲ್ಲಿನ ನಸು ನೋಟವನ್ನು ಸವಿಯಬಹುದು. ಈ ಉದ್ಯಾನವು ವಿಜಯವಾಡಾ ಪುರಸಭೆಯಿಂದ ನಿರ್ಮಿಸಲಾಗಿದ್ದು ಅವರಿಂದಲೇ ನಿರ್ವಹಿಸಲ್ಪಟ್ಟಿದೆ. ಇಲ್ಲಿ ಸಂಗೀತ ಕಾರಂಜಿಯಿದ್ದು ಸೋಮವಾರವನ್ನು ಹೊರತು ಪಡಿಸಿ ಉಳಿದ ಎಲ್ಲಾ ದಿನ ಸಂಜೆಯ ಹೊತ್ತು ಪ್ರದರ್ಶನ ಏರ್ಪಡಿಸಲಾಗುತ್ತದೆ. ಈ ಉದ್ಯಾನವನದ ಒಳಗೆ ಹಸಿರಿನ ಹುಲ್ಲು ಹಾಸಿಗೆ ಹಾಗೂ ಸಣ್ಣ ಮೃಗಾಲಯವಿದ್ದು ಸುಸಜ್ಜಿತವಾಗಿದೆ. ಇದೊಂದು ಶೈಕ್ಷಣಿಕ ಪಾರ್ಕ್ ಆಗಿದ್ದು ಇಲ್ಲಿ ಐತಿಹಾಸಿಕ ಪ್ರಾಣಿಗಳ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಈ ಉದ್ಯಾನವು ಮಕ್ಕಳಿಗೆ ಅತ್ಯಂತ ನೆಚ್ಚಿನ ಸ್ಥಳವಾಗಿದೆ.