ಕದುವಲೈ ಜುಮಾ ಮಸೀದಿ ಸಂತ ಕುದುವಲೈ ತಂಗಳ್/ಲ್ ಗೆ ಅರ್ಪಿಸಲಾಗಿದೆ. ಈ ಸುನ್ನಿ ಮಸೀದಿಯು ಸ್ಥಳೀಯರ ಮುಸ್ಲಿಂ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಈ ಮಸೀದಿಯನ್ನು ಕುದುವಲೈ ಥಂಗಳ್ ಜುಮಾ ಮಸೀದಿ ಅಥವಾ ಕುದುವಲೈ ಥಂಗಳ್ ಜುಮಾ ದುರ್ಗಎಂದೂ ಕೂಡಾ ಹೆಸರಿಸಲಾಗಿದೆ. ಈ ಮಸೀದಿ ಅಥವಾ ದುರ್ಗ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುವ ಸ್ಥಳವಾಗಿದೆ. ದೇವರು . ಸಂತ ನಮ್ಮೆಲ್ಲ ಸಮಸ್ಯೆಗಳನ್ನೂ ಪರಿಹಾರ ಮಾದುತ್ತಾನೆ ಎನ್ನುವುದು ಇಲ್ಲಿನ ನಂಬಿಕೆ.ಈ ಕುದವಲೈ ಥಂಗಳ್ ಮಸೀದಿಯು ಆಶ್ವರ್ಯವೆನಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗುತ್ತದೆ. ಪಾವಿತ್ರ್ಯ ಮತ್ತು ಸಂಯಮ ದಿಂದ ನಿಜವಾಗಲೂ ನಿಮ್ಮ ಸಮಸ್ಯೆಗಳನ್ನು ಮರೆತು ಶಾಂತವಾಗಿರುವಂತೆ ಮಾಡುತ್ತದೆ. ಅಲ್ಲದೇ ನಿಮ್ಮನ್ನು ನೀವು ಭಾವನೆಗಳ ಶರಣಾಗತಿಯನ್ನು ಮಾಡಿಕೊಳ್ಳಲು ಈ ದುರ್ಗ ಅತ್ಯಂತ ಸೂಕ್ತ ಸ್ಥಳವಾಗಿದೆ.
ಕುದುವಲೈ ಜುಮಾ ಮಸೀದಿಯು ಎನ್ ಎಚ್ 47 ನಲ್ಲಿ ಕಾಣಬಹುದಾಗಿದ್ದು, ಕಲ್ಲಾಂಪಂಲಂ ಹಾಗೂ ಅತ್ತಿಂಗಳ್ ಪ್ರದೇಶದ ಬಳಿ ಇದೆ. ಈ ಮಸೀದಿಯು ಧಾರ್ಮಿಕ ನಂಬಿಕೆಗೆ ಅದ್ಭುತ ಉದಾಹರಣೆಯಾಗಿದ್ದು, ಭಕ್ತಾದಿಗಳು ಹಾಗೂ ಪ್ರವಾಸಿಗರು ಆಂತರಿಕ ಶಾಂತಿಯನ್ನು ಬಯಸಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಾರೆ.


Click it and Unblock the Notifications