ಕರಿಸುಮಾಲ ಗುಡ್ಡವನ್ನು ಹೋಲಿ ಕ್ರಾಸ್‌ನ ಗುಡ್ಡ ಎಂದೂ ಕರೆಯಲಾಗಿದೆ. ವಗಮೋನ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿ ಈ ಗುಡ್ಡವಿದೆ. ಕ್ರಿಶ್ಚಿಯನ್ನರಿಗೆ ಅತ್ಯಂತ ಪ್ರಮುಖವಾದ ಧಾರ್ಮಿಕ ಕೇಂದ್ರವಿದು. ಇಲ್ಲಿರುವ ಡೈರಿ ಫಾರಂಗಳೂ ಕೂಡಾ ಜನಪ್ರಿಯ. ಗುಡ್ಡದ ಎರಡೂ ಕಡೆಗೆ ಚಹಾ ತೋಟಗಳನ್ನು ಹೊಂದಿದ್ದು, ಕಣ್ಮನ ತಣಿಸುತ್ತದೆ. ದಟ್ಟ ಅರಣ್ಯಗಳು ಪ್ರವಾಸಿಗರನ್ನು ಮುದಗೊಳಿಸುತ್ತದೆ. ಮುರುಗನ್ ಪಾರಾವನ್ನೂ ಕುಡಾ ಈ ಗುಡ್ಡದಿಂದ ಕಾಣಬಹುದು. ದೂರದೂರುಗಳಿಂದ ಇಲ್ಲಿಗೆ ಪ್ರವಾಸಕ್ಕೆ, ಟ್ರೆಕ್ಕಿಂಗ್‌ಗೆ ಬರುತ್ತಾರೆ. ಇಲ್ಲಿರುವ ಕರಿಸುಮಲ ಆಶ್ರಮಕ್ಕೆ ಭಕ್ತರ ದಂಡೇ ಬರುತ್ತದೆ. ಗುಡ್ ಪ್ರೈಡೆಯ ಸಂದರ್ಭದಲ್ಲಿ ಕೈಯಲ್ಲಿ ಕ್ರಾಸ್‌ಅನ್ನು ಹಿಡಿದುಕೊಂಡು ಕರಿಸುಮಲ ಗುಡ್ಡವನ್ನು ಭಕ್ತರು ಹತ್ತುತ್ತಾರೆ.
ಗುಡ್ಡದ ದಾರಿಯಲ್ಲಿ ಯುರೋಪಿಯನ್ ಮಾದರಿಯಲ್ಲಿ ಕಟ್ಟಿದ ಒಂದು ಪುರಾತನ ಮನೆಯಿದೆ. ಈ ಮನೆಯ ಹಿಂದೆ ಕೃತಕ ಕೆರೆ ಇದೆ. ಈ ಮನೆ ಮತ್ತು ಕೆರೆಯನ್ನು ನಿರ್ಮಿಸಿದ್ದು ಲಾರೀ ಬೇಕರ‍್. ಇಂಡೋ-ಸ್ವಿಸ್ ಪ್ರಾಜೆಕ್ಟ್‌ನಲ್ಲಿ ಕರಿಸುಮಲ ಆಶ್ರಮದ ಭಕ್ತರಿಂದ ನಡೆಸಲ್ಪಡುವ ಡೈರಿ ಫಾರಂಅನ್ನೂ ಕೂಡಾ ನೋಡಬಹುದು.


Click it and Unblock the Notifications