ಉನಾ ಜಿಲ್ಲೆಯ ನಾರಿ ಎಂಬ ಹಳ್ಳಿಯಲ್ಲಿದೆ ಈ ಡೇರಾ ಬಾಬಾ ರುದ್ರು. ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಉನಾದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಇದು ಬಾಬಾ ರುದ್ರಾನಂದರಿಗೆ ಮೀಸಲಾದ ಮಂದಿರ. ಇವರು ಹಿಂದು ದೇವರಾದ ಶಿವನ ಅವತಾರ ಎಂದು ಪರಿಗಣಿಸಲಾಗಿದೆ. ಇವರು ಈ ದೇಗುಲ ನಿರ್ಮಾಣವನ್ನು ಮಾತ್ರ ಮಾಡಿದ್ದಲ್ಲದೆ 'ಅಖಂಡ ಧೂನ' ಎಂಬ ದೈವಿ ಶಕ್ತಿ ಉಳ್ಳ ಅಗ್ನಿಕುಂಡವನ್ನು 1850 ರಲ್ಲಿ ಸ್ಥಾಪಿಸಿದರು. ಅಂದಿನಿಂದ ಈ ಪವಿತ್ರ ಅಗ್ನಿ ಭೂದಿಯು ಇಂದಿಗೂ ಉರಿಯುತ್ತಿದೆ ಎಂದು ಹೇಳಲಾಗುತ್ತದೆ. ಅಷ್ಟೆ ಅಲ್ಲ ನಂಬಿಕೆಗಳ ಪ್ರಕಾರ, ಈ ಪವಿತ್ರ ಭೂದಿಯು ಹಾವಿನ ವಿಷಕ್ಕೆ ಪರಿಣಾಮಕಾರಿಯಾದ ಮದ್ದು ಕೂಡ ಆಗಿದೆ. ಪ್ರಸ್ತುತ ಇಂದಿನ ಗುರುವಾಗಿರುವ ಮಹಾಂತ ಸುಗ್ರೀವಾನಂದರು, 1970 ರಲ್ಲಿ ದೆಹಲಿಯಲ್ಲಿ ಬಾಬಾ ರುದ್ರು ಬಾಲ ಗೋಪಾಲ ದೇಗುಲ ನಿರ್ಮಿಸಿದ್ದಾರೆ.
ಇಲ್ಲಿ ಸಾಮಾನ್ಯವಾಗಿ ಆಯೋಜನೆಯಾಗುವ ಉತ್ಸವಗಳೆಂದರೆ ಪಂಚ ಭೀಷ್ಮ ಮೇಳ, ನೀರಜಾಲಾ ಏಕಾದಶಿ ಜಾತ್ರೆ, ಬಾಬಾ ರುದ್ರು ಜಯಂತಿ, ಗುರು ಪೂರ್ಣಿಮೆ ಆಚರಣೆಗಳು. ಅತ್ಯಂತ ಶೃದ್ಧಾ, ಭಕ್ತಿಯಿಂದ ಇವುಗಳು ಆಚರಿಸಲ್ಪಡುತ್ತವೆ. ಕುಶೋಕ್ಪತಿನಿ ಅಮಾವಾಸ್ಯೆ ಇಲ್ಲಿ ನಡೆಯುವ ವಿಶೀಷ್ಠ ಜಾತ್ರೆ. ಇದನ್ನು ಪ್ರತಿ ವರ್ಷ ಹಿಂದು ಕ್ಯಾಲೇಂಡರ್ ಪ್ರಕಾರ ನಡೆಯುವ ಶಿವರಾತ್ರಿ ಹಬ್ಬದಂದು ಆಚರಿಸಲಾಗುತ್ತದೆ.


Click it and Unblock the Notifications