ಕಲ್ಯಾಣ್ ಸಾಗರ್ ತ್ರಿಪುರ ಸುಂದರಿ ದೇವಸ್ಥಾನದ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ. ಈ ಸರೋವರವು ಐದು ಎಕರೆಗಳಷ್ಟು ವಿಸ್ತಾರ ಹೊಂದಿದ್ದು, ಇದರ ಉದ್ದ 224 ಗಜ ಹಾಗೂ ಅಗಲ 160 ಗಜಗಳಾಗಿವೆ. 1501 ರಲ್ಲಿ ಮಹಾರಾಜ ಕಲಿಯನ್ ಮನಿಕ್ಯರ ಕಾಲದಲ್ಲಿ ನಿರ್ಮಿಸಿದ್ದ ಈ ಸರೋವರವನ್ನು, ತ್ರಿಪುರ ಸುಂದರಿ ದೇವಸ್ಥಾನ ನಿರ್ಮಾಣದ 124 ವರ್ಷಗಳ ನಂತರ ಕೊರೆಯಲಾಯಿತು.
ಕಲ್ಯಾಣ ಸಾಗರ ಸರೋವರದಲ್ಲಿ ವಿವಿಧ ತರಹದ ಮೀನು, ಆಮೆ ಹಾಗೂ ಇತರ ಜಲಚರ ಪ್ರಾಣಿಗಳು ವಾಸಿಸುತ್ತವೆ. ಇಲ್ಲಿ ಮೀನುಗಾರಿಕೆ ನಿಷೇಧವಾಗಿದ್ದು, ಭಕ್ತರು ಮೀನುಗಳಿಗೆ ಹುರಿಯಕ್ಕಿ ಮತ್ತು ಬಿಸ್ಕೆಟ್ ಗಳನ್ನು ನೀಡುತ್ತಾರೆ.
ಉದಯಪುರ್ ಅನ್ನು ಸರೋವರಗಳ ನಗರ ಎನಿಸಿಕೊಳ್ಳಲು ಸಹಾಯಕವಾಗಿರುವ ಹಲವು ಸರೋವರಗಳಲ್ಲಿ ಒಂದಾದ ಕಲ್ಯಾಣ್ ಸಾಗರ್, ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಭಕ್ತರಿಂದ ಪುಣ್ಯ ಸರೋವರ ಎಂದೂ ಅನಿಸಿಕೊಂಡಿದೆ.


Click it and Unblock the Notifications