Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು » ವೀರಮಲೈ ಮುರುಗನ್ ದೇವಸ್ಥಾನ

ವೀರಮಲೈ ಮುರುಗನ್ ದೇವಸ್ಥಾನ, ತಿರುಚ್ಚಿ

1

ತಿರುಚ್ಚಿ ನಗರದ ಮಧ್ಯದಲ್ಲಿರುವ ವೀರಮಲೈ ಎಂಬ ಬೆಟ್ಟದ ಮೇಲೆ ವೀರಮಲೈ ಮುರುಗನ್ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವನ್ನು ತಲುಪಲು ನೀವು 207 ಮೆಟ್ಟಿಲುಗಳನ್ನು ಏರಬೇಕು. ಈ ಮೆಟ್ಟಿಲುಗಳನ್ನು ಹಾಯ್ದು ಹೋಗುವಾಗ ನಿಮಗೆ ಮಂಡಪಮಗಳು ಕಾಣಸಿಗುತ್ತವೆ. ಇವು ವಿಶ್ರಾಂತಿ ಕೋಣೆಗಳಾಗಿದ್ದು ಭಕ್ತರು ಇಲ್ಲಿ ವಿಶ್ರಾಂತಿಯನ್ನು ಪಡೆದು ಮುಂದಕ್ಕೆ ಸಾಗುತ್ತಾರೆ.

ಈ ದೇವಸ್ಥಾನದಲ್ಲಿ ಹಲವಾರು ಆಚರಣೆಗಳನ್ನು ಮಾಡಲಾಗುತ್ತದೆ. ಇಲ್ಲಿರುವ ಒಂದು ವಿಶೇಷ ಆಚರಣೆ ಎಂದರೆ ಇಲ್ಲಿಯ ದೇವರಾದ ದಂಡಾಯುಧಪಾನಿಗೆ ಸಿಗಾರಿನ ನೈವೇದ್ಯವನ್ನು ಮಾಡುವುದು. ಈ ಸಿಗಾರಿಗೆ ಚಂದನದಿಂದ  ಮಾಡಲಾಗಿರುತ್ತದೆ. ಇದು ದೇವಸ್ಥಾನದ ಪ್ರಮುಖ ಆಚರಣೆಯಾಗಿದೆ. ಈ ದೇವಾಲಯವು ಅನೇಕ ಮರಗಿಡಗಳಿಂದ ಸುತ್ತುವರೆದಿದೆ. ಪ್ರಾಚೀನ ಯೋಗಿಗಳು ಮತ್ತು ಋಷಿಗಳು ವೀರಮಲೈ ಮುರುಗನ್ ದೇವಸ್ಥಾನದ ದೇವತೆಯಾದ ವೀರಮಲೈಗೆ ಪ್ರಾರ್ಥನೆಯನ್ನು ಸಲ್ಲಿಸುವಾಗ ಈ ಮರಗಿಡಗಳನ್ನು ಬಳಸುತ್ತಿದ್ದರು ಎಂಬ ನಂಬಿಕೆ ಇದೆ.

ಆದ್ದರಿಂದ ಈ ಮರಗಿಡಗಳನ್ನು ಪವಿತ್ರವಾದವುಗಳು ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಸುತ್ತಮುತ್ತಲೂ ನೀವು ನವಿಲುಗಳನ್ನು ಸಹ ಕಾಣಬಹುದು. ದೇವಾಲಯದ ಆವರಣದೊಳಗೆ ನೀವು ನಾರದಮುನಿ ಮತ್ತು ಕಶ್ಯಪ  ಋಷಿಯ ಸಣ್ಣ ದೇವಸ್ಥಾನಗಳನ್ನು ನೀವು ನೋಡಬಹುದು. ಈ ದೇವಸ್ಥಾನದ ಖಂಬದ ಮೇಲೆ ಅರ್ಮುಗನ್ ಮತ್ತು ಅರುಣಗಿರಿನಾಥರ ವಿವಿಧ ಭಂಗಿಗಳನ್ನು ಕೆತ್ತಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu