ತಿನ್ಸುಕಿಯಾ ನಗರ, ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯಲ್ಲಿದ್ದು ಇದು ಅಸ್ಸಾಂ ರಾಜ್ಯದ ಪ್ರಮುಖ ವ್ಯಾಪಾರೀ ಕೇಂದ್ರವಾಗಿದೆ. ತಿನ್ಸುಕಿಯಾದ ಪ್ರವಾಸೋದ್ಯಮ ಮತ್ತು ಅಸ್ಸಾಂ ರಾಜ್ಯದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ. ಇದು ಭಾರತದ ವಾಣಿಜ್ಯ ಕೇಂದ್ರವೆನ್ನುವ ಹೆಸರನ್ನೂ ಪಡೆದಿದ್ದು ಗುವಹಾಟಿಯಿಂದ 500 ಕಿಲೋಮೀಟರ್ ದೂರದಲ್ಲಿದೆ. ತಿನ್ಸುಕಿಯಾ ಅಸ್ಸಾಮಿನ ಎರಡನೇ ಪ್ರಮುಖ ನಗರವಾಗಿದ್ದು ಇದನ್ನು ಚಾಂಗಮಾಯಿ ಪಾಥರ್ ಎಂದೂ ಕರೆಯುತ್ತಾರೆ. ಇದಕ್ಕೆ ಪುರಾತನ ಕಾಲದಿಂದ ಬಂದ ಹೆಸರೆಂದರೆ ಬಂಗಾಮರ. ಇದು ಮಟಕ್ ಪ್ರದೇಶದ ರಾಜಧಾನಿಯಾಗಿದ್ದು, ಇದು ಅಸ್ಸಾಂ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಟೀ ಮತ್ತು ಮರದ ವಸ್ತುಗಳಿಗೆ ಹೆಸರುವಾಸಿ.
ತಿನ್ಸುಕಿಯಾ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು
ತಿನ್ಸುಕಿಯಾದ ಪ್ರಮುಖ ಆಕರ್ಷಣೆಯಿಂದರೆ ದಿಬ್ರು ಸಾಯಿಕೋವಾ ರಾಷ್ಟ್ರೀಯ ಉದ್ಯಾನವನ. ಇದು ಅತ್ಯಾಕರ್ಷಕವಾದ ಪ್ರಾಣಿಗಳ ವಲಯವಾಗಿದ್ದು, ಅಲ್ಲದೇ ಹೂಗಳು ಮತ್ತು ವನಸ್ಪತಿ ಸಂಬಂಧ ಶ್ರೀಮಂತವಾಗಿದೆ. ಇದು ಹಲವು ಜೀವಚರಗಳಿಗೂ ಹೆಸರುವಾಸಿಯಾಗಿದೆ ಪ್ರಮುಖವಾಗಿ ಗಂಗೆಯ ಹಂದಿ ಮೀನು, ನೀರು ಕೋಣ, ಬಿಳಿ ರೆಕ್ಕೆಯ ಬಾತುಕೋಳಿ, ಸಿಂಹಳ ಕಪಿ, ಆನೆಗಳು ಇತ್ಯಾದಿ..
ತಿನ್ಸುಕಿಯಾ ತಲುಪುವುದು ಹೇಗೆ
ತಿನ್ಸುಕಿಯಾ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಉತ್ತಮ ಸಂಪರ್ಕದಲ್ಲಿದೆ.


Click it and Unblock the Notifications