Search
 • Follow NativePlanet
Share
ಮುಖಪುಟ » ಸ್ಥಳಗಳು » ತಿರುವನೈಕಾವಲ್ » ಆಕರ್ಷಣೆಗಳು » ಜಂಬುಕೇಶ್ವರರ್ ಮತ್ತು ಅಖಿಲಂದೇಶ್ವರಿ ದೇವಾಲಯ

ಜಂಬುಕೇಶ್ವರರ್ ಮತ್ತು ಅಖಿಲಂದೇಶ್ವರಿ ದೇವಾಲಯ, ತಿರುವನೈಕಾವಲ್

2

ಸುಮಾರು 1800 ವರ್ಷಗಳ ಹಿಂದೆ ಚೋಳರ ಆಳ್ವಿಕೆ ಪ್ರಾರಂಭವಾದ ಕಾಲದಲ್ಲಿ ರಾಜನಾಗಿದ್ದ ಕೊಚೆಂಗ ಚೋಳನು ಈ ದೇವಾಲಯವನ್ನು ಕಟ್ಟಿಸಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ಇಂದಿಗೂ ಸುಸ್ಥಿತಿಯಲ್ಲಿರುವ ಈ ಪ್ರಾಚೀನ ದೇವಾಲಯವನ್ನು ಆ ಬಳಿಕ ಆಳ್ವಿಕೆಗೆ ಬಂದ ಎಲ್ಲಾ ರಾಜರು ನಿರ್ವಹಣೆಗೆ ಒತ್ತು ಕೊಟ್ಟಿರುವುದು ಈ ದೇವಾಲಯದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಈ ದೇವಾಲಯದ ವಿಸ್ಮಯವೆಂದರೆ ಗರ್ಭಗುಡಿಯ ತಲದಿಂದ ಸ್ಪಟಿಕಶುಭ್ರ ನೀರಿನ ಒರತೆಯಿದೆ. ಈ ನೀರನ್ನು ಎಷ್ಟು ಖಾಲಿ ಮಾಡಿದರೂ ಮತ್ತೆ ತುಂಬಿಕೊಳ್ಳುತ್ತಿದ್ದು ನೀರಿನ ಸೆಲೆ ಎಲ್ಲಿದೆಯೆಂದೇ ಗೊತ್ತಾಗದಿರುವುದು ಸ್ಥಳದ ಮಹಾತ್ಮೆಯನ್ನು ಬಣ್ಣಿಸುತ್ತದೆ. ತಮಿಳುನಾಡಿನ ಐದು ಧಾತುಗಳನ್ನು ಪ್ರತಿನಿಧಿಸುವ ಐದು ಶಿವಾಲಯಗಳಲ್ಲಿ ಜಂಬುಲಿಂಗೇಶ್ವರರ್ ಸಹಾ ಒಂದು. ಈ ದೇವಾಲಯ ಪಂಚಧಾತುಗಳಲ್ಲೊಂದಾದ ನೀರನ್ನು ಪ್ರತಿನಿಧಿಸುತ್ತದೆ.

ಹಿಂದೂ ಪುರಾಣದ ಪ್ರಕಾರ ಯಾವುದೋ ಚಿಕ್ಕ ಕಾರಣಕ್ಕಾಗಿ ಪಾರ್ವತಿಯನ್ನು ಶಪಿಸಿದ ಶಿವ ಈ ಶಾಪವಿಮೋಚನೆಗಾಗಿ ಭೂಮಿಗೆ ತೆರಳಲು ಸೂಚಿಸುತ್ತಾನೆ. ಅಂತೆಯೇ ಭೂಮಿಗೆ ಆಗಮಿಸಿದ ಪಾರ್ವತಿ ಜಂಬೂ ಅರಣ್ಯದಲ್ಲಿ ಅಖಿಲಂದೇಶ್ವರಿಯ ರೂಪದಲ್ಲಿ ವಾಸಿಸಲು ತೊಡಗುತ್ತಾಳೆ. ಅಲ್ಲಿಯೇ ಕಾವೇರಿಯ ನೀರಿನಿಂದ ಶಿವಲಿಂಗವೊಂದನ್ನು ಸೃಷ್ಟಿಸಿ ಪೂಜಿಸಲು ತೊಡಗುತ್ತಾಳೆ. ಕಡೆಗೆ ಶಿವನು ಆಕೆಗೆ ದರ್ಶನ ನೀಡಿ ಶಿವಜ್ಞಾನವನ್ನು ಕರುಣಿಸುತ್ತಾನೆ. ಈ ಉಪದೇಶ ಕರುಣಿಸುವಾಗ ಶಿವನು ಪಶ್ಚಿಮಕ್ಕೂ ಅಖಿಲಂದೇಶ್ವರಿ ಪೂರ್ವಕ್ಕೂ ಮುಖ ಮಾಡಿರುತ್ತಾರೆ.   ಈ ಶಿವಲಿಂಗವಿದ್ದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ನೀರಿನಿಂದ ಸೃಷ್ಟಿಸಲಾದ ಈ ಶಿವಲಿಂಗಕ್ಕೆ ಅಪ್ಪು ಲಿಂಗಂ ಎಂದೂ ಕರೆಯುತ್ತಾರೆ.

ಇನ್ನೊಂದು ವಿಶೇಷವೆಂದರೆ ಅಖಿಲಂದೇಶ್ವರಿ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಿದ ಕಾರಣವಾಗಿ ಇಂದಿಗೂ ಅರ್ಚಕರು ಹೆಣ್ಣಿನ ಉಡುಪುಗಳನ್ನು ಧರಿಸಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಕಪ್ಪುಬಣ್ಣದ ಹಸುವಿಗೂ (ಗೋಮಾತೆ) ಪೂಜೆ ಸಲ್ಲಿಸಲಾಗುತ್ತದೆ. ತಮಿಳಿನಲ್ಲಿ ಈ ಹಸುವನ್ನು ಕರಂಪಶು ಎಂದು ಕರೆಯುತ್ತಾರೆ. ಪ್ರತಿದಿನ ಶಿವಲಿಂಗಕ್ಕೆ ಅನ್ನಾಭಿಷೇಕ ನಡೆಸಲಾಗುತ್ತದೆ. ಭಾರತೀಯ ನೃತ್ಯವೈಭವದ ವಾರ್ಷಿಕ "ನಾಟ್ಯಾಂಜಲಿ" ಕಾರ್ಯಕ್ರಮವೂ ಇದೇ ದೇವಾಲಯದ ಆವರಣದಲ್ಲಿ ನಡೆಸಲಾಗುತ್ತದೆ. ಅಲ್ಲದೇ ತಮಿಳುನಾಡಿನ ವಿಶಿಷ್ಟ 'ನಾದಸ್ವರ' ನುಡಿಸುವ ಬಗ್ಗೆ ತರಬೇತಿಯನ್ನೂ ಈ ದೇವಾಲಯದಲ್ಲಿ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Thiruvanaikaval
  30 OC
  87 OF
  UV Index: 7
  Patchy rain possible
 • Tomorrow
  Thiruvanaikaval
  27 OC
  80 OF
  UV Index: 7
  Moderate or heavy rain shower
 • Day After
  Thiruvanaikaval
  24 OC
  76 OF
  UV Index: 7
  Moderate or heavy rain shower