ಚಕ್ಕುಲತು ಕವು ದೇವಾಲಯ ತಿರುವಲ್ಲಾ ಪಟ್ಟಣದ ಪಶ್ಚಿಮಕ್ಕೆ 12 ಕೀ.ಮಿ ದೂರದಲ್ಲಿ ಕಾಣಬಹುದು. ಚಕ್ಕುಲತು ಕವು ದೇವಾಲಯ ತಿರುವಲ್ಲಾ ಪಟ್ಟಣದ ಪಶ್ಚಿಮಕ್ಕೆ 12 ಕೀ.ಮಿ ದೂರದಲ್ಲಿ ಕಾಣಬಹುದು. ಇಲ್ಲಿನ ದೃಶ್ಯ ಸದೃಶಗಳು ಭಕ್ತಾದಿಗಳನ್ನು ಹಾಗೂ ಸಂದರ್ಶಕರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಪಂಪಾ ಹಾಗೂ ಮಣಿಮಾಲಾ ನದಿಗಳ ನಡುವೆ ನೆಲೆಯಾಗಿದೆ. ಪಥನಂತಿಟ್ಟ ಮತ್ತು ಆಲಪುಳ ಎಂಬ ಜಿಲ್ಲೆಯ ಗಡಿಯ ನಡುವೆ ಸ್ಥಾಪಿಸಲಾಗಿದೆ. ಈ ದೇವಾಲಯವು 3000 ವರ್ಷ ಹಳೆಯದಾಗಿದೆ. ಇಲ್ಲಿನ ಪೂಜ್ಯನೀಯ ದೇವತೆ ಭಗವತಿ. ಚಕ್ಕುಲತಮ್ಮ ಎಂದು ಸ್ಥಳೀಯರು ಕರೆಯುತ್ತಾರೆ.
ಚಕ್ಕುಲಥು ಕವು ದೇವಾಲಯವು ಸಬರಿಮಾಲಾ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಹಬ್ಬವು ನವೆಂಬರ್ ಹಾಗೂ ಡೆಸೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಕಾಡಿನ ಮಧ್ಯದಲ್ಲಿರುವ ಈ ದೇವಾಲಯವು ಮನಸ್ಸಿಗೆ ನೆಮ್ಮದಿಯನ್ನು ಉಲ್ಲಾಸವನ್ನು ಉಂಟುಮಾಡುತ್ತದೆ. ಎರಡು ನದಿಗಳ ನಡುವಿನ ಈ ದೇವಾಲಯದ ದೃಶ್ಯ ನಿಜಕ್ಕೂ ಮನಸೆಳೆಯುವಂತದ್ದು, ಇಲ್ಲಿ ದೋಣಿ ಸ್ಪರ್ಧೆಯು ಜನಪ್ರಿಯ ಆಟವಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಹಾಗೂ ಅನುಭವಿಸ ಬೇಕೆಂದಿದ್ದರೆ ನೀವು ನಿಮ್ಮ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬರಲೇ ಬೇಕು.