ತಂಜಾವೂರಿನಲ್ಲಿರುವ ಈ ಕಲಾ ಭವನವನ್ನು 1600 ರಲ್ಲಿ ಕಟ್ಟಲಾಗಿದ್ದು, ದಕ್ಷಿಣ ಭಾರತದ ಬಗೆ ಬಗೆಯ ವಿಗ್ರಹ ಹಾಗೂ ಚಿತ್ರಕಲೆಗಳನ್ನು ಒಳಗೊಂಡಿದೆ. ಇದು ತಂಜಾವೂರ್ ಅರಮನೆಯ ಭಾಗವಾಗಿದ್ದು ಅದರದ್ದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ತಂಜಾವೂರು ಕಲಾಭವನ ಅಲ್ಲಿರುವ 9 ರಿಂದ 12 ನೆ ಶತಮಾನಕ್ಕೆ ಸೇರಿದ ಮಾನವ ನಿರ್ಮಿತ ಕಲಾಕೃತಿ, ಸ್ಮಾರಕ ವಸ್ತು ಹಾಗೂ ಕಂಚಿನ ವಿಗ್ರಹ ಮುಂತಾದ ಕಲಾಕೃತಿಗಳಿಗೆ ಖ್ಯಾತಿ ಪಡೆದಿದೆ. ಇವುಗಳನ್ನು ತಂಜಾವೂರಿನ ವಿವಿಧ ದೇವಸ್ಥಾನಗಳಿಂದ ತರಲಾಗಿದೆ. ಕೆಲವು ಸ್ಮಾರಕ ವಸ್ತುಗಳನ್ನು ಕಳ್ಳತನಕ್ಕೆ ಹೆದರಿ ಹೂತಿಡಲಾಗಿತ್ತು.
ಈ ಭವನದಲ್ಲಿ ಮೂರು ವಿಭಾಗಗಳಿವೆ -ಇಂದಿರಾ ಮಂದಿರ, ಪೂಜಾ ಮಹಲ್ ಮತ್ತು ರಾಮ ಚೌಡಂ ಹಾಲ್. ಪೂಜಾ ಮಹಲ್ ಕಲ್ಲಿನ ಶಿಲ್ಪಗಳನ್ನು ಪ್ರದರ್ಶಿಸಿದರೆ, ಇಂದಿರಾ ಮಂದಿರದಲ್ಲಿ ಮಾನವ ನಿರ್ಮಿತ ಕಲಾಕೃತಿ ಮತ್ತು ಕಲ್ಲಿನಲ್ಲಿ ಕೆತ್ತಿದ ದೇವರ ವಿವಿಧ ರೂಪಗಳನ್ನು ಹಾಗೂ ರಾಮ ಚೌಡಂ ಹಾಲ್ ನಲ್ಲಿ ಕಂಚಿನ ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ.


Click it and Unblock the Notifications